ಆತ್ಮೀಯರೇ
ಇಂದು ನಮ್ಮ ಸಮಾಜವು ಕವಲು ದಾರಿಯಲ್ಲಿ ಇದೆ.ಸಮಾಜದ ಉಧ್ಧಾರಕ್ಕಗಿ,ಭಕ್ತರ ಉದ್ಧಾರಕ್ಕಾಗಿ ತಲೆ ತಲಾಂತರದಿಂದ ಎಲ್ಲ ಸೌಲಭ್ಯಗಳಿಂದ ವಂಚಿತರಾಗಿ ಬಡವರಾಗಿಯೇ ಉಳಿದಿದ್ದೇವೆ. ಇಂದು ಏನಾದರು ವೀರಶೈವ ಧರ್ಮ ಉಳಿದುಕೊಂಡು ಬಂದಿದ್ದೆಯಾದರೆ ಅದು ನಮ್ಮ ಸಮಾಜದ ಪೂರ್ವಜರಿಂದ ಮಾತ್ರ ಎಂಬುವದು ಸೂರ್ಯನಷ್ಟೇ ಸತ್ಯ.ಬಸವಾದಿ ಪ್ರಮಥರ ವಚನಗಳು ರಕ್ಷಿಸಿಕೊಂಡು ಬಂದವರಲ್ಲಿ ಈ ಹಳ್ಳಿಯ ಹೈದ ಜಂಗಮರೆ ಹೊರತು ಅನಾಧಿಕಾರಿ ಲಿಂಗಾಯತಲ್ಲ. ಆದರೂ ಇತ್ತೀಚಿನ ದಿನಗಳಲ್ಲಿ ಈ ಜಂಗಮ ನಿಂದೆ ಹೆಚ್ಚಾಗಿದೆ. ನಾವು ಜಂಗಮರೆ ಅಲ್ಲವಂತೆ.ಹಾಗಾದರೆ ನಾವು ಯಾರು ? ಜಂಗಮರು ಯಾರು ಬೇಕಾದವರು ಆಗಲು ಬರುತ್ತದೆ ಎಂದು ಸ್ವಯಂ ಘೋಷಿತ ಬುದ್ದಿಜೀವಿಗಳ ಮೊಂಡ ವಾದವಾಗಿದೆ. ಆದರೆ ಅವರು ಇದೆ ಸಂಧರ್ಭದಲ್ಲಿ ಲಿಂಗ ಆಯತ ಮಾಡಿಕೊಂಡವರು ಮಾತ್ರ ಲಿಂಗಾಯತ ಎಂದು ಹೇಳುವದನ್ನು ಮರೆಯುತ್ತಾರೆ. ನಮ್ಮ ಜಂಗಮರು ಹುಟ್ಟಿನಿಂದ ಎಂದು ಜಂಗಮರೆಂದು ಹೇಳಿಕೊಂಡಿಲ್ಲ ನಾವು ಹುಟ್ಟಿ ಎಂಟು ವರ್ಷಗಳವರೆಗೆ ಲಿಂಗಾಯತರಾಗಿ ಮಾತ್ರ ಇದ್ದು, ಎಂಟು ವರ್ಷ ಮುಗಿದನಂತರ ವೀರಶೈವ ಪರಂಪರೆಯ ಉಪಾಚಾರ್ಯರಿಂದ ಕ್ರಮಬದ್ದವಾಗಿ ಅಯ್ಯಾಚಾರ ಮಾಡಿಕೊಂಡು ಜಂಗಮರಾಗಿ ಉಳಿದು ಕೊಂಡು ಬಂದಿದ್ದೇವೆ. ಅಯ್ಯಾಚಾರ ಆಗುವವವರೆಗೆ ಅಯ್ಯನವರು ಆಗಿರುವುದಿಲ್ಲ. ಇವತ್ತಿಗೂ ಈ ಸಂಸ್ಕಾರ ಮುಂದು ವರೆಸಿಕೊಂಡು ಬಂದಿದ್ದೇವೆ. ಆದರೆ ಲಿಂಗವಂತರು ಎಂದು ಹೇಳಿಕೊಳ್ಳುವ ಆ ತತ್ವದ ಬಗ್ಗೆ ವಾದಮಾಡುವ ಪೊಳ್ಳು ಪಂಡಿತರು ತಾವಾಗಲಿ ತಮ್ಮ ಮನೆಯ ಎಲ್ಲ ಸದಸ್ಯರೆಲ್ಲರಾಗಲಿ ಲಿಂಗ ದೀಕ್ಷೆ ಹೊಂದಿದ್ದಾರೆಯೇ ? ಖಾತರಿ ಪಡಿಸಲಿ.ಆಗ ಜಂಗಮರಿಗೆ ಬುದ್ದಿ ಹೇಳಲು ಬರಲಿ.ಹೋಗಲಿ ... ಅವರು ಹೇಳುವ ಲಿಂಗಾಯತ ಧರ್ಮದಲ್ಲಿ ಜಂಗಮರೆಂದರೆ ಯಾರು ? ಅವರೇ ವಿಶ್ಲೇಷಣೆ ಮಾಡುವ ರೀತಿಯ ಜಂಗಮರು ಬೆರಳೆಣಕೆ ಅಷ್ಟಾದರೂ ಹುಡುಕಿ ಕೊಡುತ್ತಾರೆಯೇ? ಹೋಗಲಿ ತಮ್ಮ ಸ್ವಯಂ ಘೋಷಿತ ಮಠಗಳಲ್ಲಿ ಪೀಠಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಯಾದರು ಲಿಂಗಾಯತರಾಗಿದ್ದರೆಯೇ ಎಂದು ಎದೆ ಮುಟ್ಟಿಕೊಂಡು ಹೇಳುತ್ತಾರೆಯೇ ? ಮೊದಲು ತಮ್ಮ ತಟ್ಟೆಯಲ್ಲಿ ಬಿದ್ದಿರುವ ಕತ್ತೆಯನ್ನು ತಗೆದು ಇನ್ನೊಬ್ಬರ ತಟ್ಟೆಯ ನೊಣ ತಗೆಯಲು ಹೋಗಲಿ. ಜಗತ್ತಿನಲ್ಲಿ ಸುಂತಿ ಆಗದ ಮುಸಲ ಮಾನನಿಲ್ಲ, ಉಪನಯನ ಮಾಡಿಕೊಳ್ಳದ ಬ್ರಾಹ್ಮಣನಿಲ್ಲ ಅದೇ ರೀತಿ ಪವಿತ್ರ ಸ್ನಾನ ಮಾಡದ ಕ್ರಿಶ್ಚಿಯನ ಇಲ್ಲ. ಅದೇ ರೀತಿ ಒಂದು ಸಣ್ಣ ಧರ್ಮ ದಿಂದಾ ಹಿಡಿದು ಬುಡಕಟ್ಟು ಜನಾಂಗದ ಸಣ್ಣ ಗುಂಪು ಇರುವ ಜನಾಂಗವು ತಮ್ಮ ಆಚರಣೆ ಬಿಟ್ಟಿಲ್ಲ.ಆದರೆ ಲಿಂಗಾಯತರಲ್ಲಿ ಕಡ್ಡಾಯ ಲಿಂಗ ಧೀಕ್ಷೆ ಸಂಸ್ಕಾರ ಮಾಡಿಕೊಂಡವರು ಎಷ್ಟು ಜನರಿದ್ದಾರೆ ಹೇಳಲಿ. ಯಾರ ಎದೆಯ ಮೇಲೆ ಯಾದರು ಲಿಂಗ ಅನ್ನುವದು ಇದ್ದರೆ ಅದು ಅವರೆಲ್ಲ ಹುಟ್ಟಿದಾಗ ಆ ಊರ ಜಂಗಮ ಕಟ್ಟಿದ್ದೆ ಹೊರತು ಬೇರೆ ಯಾರು ಅಲ್ಲ. ಪ್ರತಿ ಹಳ್ಳಿಗೆ ಹೋಗಿ ಲಿಂಗ ಧಾರಣೆ ಮಾಡುವದು ಈ ಪಟ್ಟಾಧಿಕಾರಿಗಳಿಗಾಗಲಿ ಜಗದ್ಗುರುಗಳಿಗಾಗಲಿ ಸಾಧ್ಯವಾಗದೆಂದು ನಮ್ಮನ್ನೆಲ್ಲ ಅಯ್ಯಚಾರ ಮಾಡಿ ಹಳ್ಳಿಯಲ್ಲಿನ ಭಕ್ತರಿಗೆ ಲಿಂಗಕಟ್ಟಲು ಅಧಿಕಾರ ನೀಡಿದರು. ಈ ಒಣ ಅಧಿಕಾರಕ್ಕಾಗಿ ಹೊಲ ಮನಿ ಉದ್ಯೋಗ ವ್ಯಾಪಾರ ಬಿಟ್ಟು ಬಡವರಾಗಿ ಉಳಿಯ ಬೇಕಾಯಿತು.ನಮಗಾದರೂ ಈ ಜಂಗಮ ಪದವಿ ಬೇಕಾಗಿಲ್ಲ ಯಾರು ಬೇಕಾದವರು ಮಾಡಿಕೊಂಡು ಬರಲಿ ನಮ್ಮ ಅಭ್ಯಂತರವಿಲ್ಲ. ಆದರೆ ನಮಗೆ ಹೇಳುವ ಅಧಿಕಾರ ಇವರಿಗೆ ಕೊಟ್ಟವರಾರು ? ಪ್ರಶ್ನಿಸಬೇಕಾಗುತ್ತದೆ. ನಿಮಗೆ ಹಳ್ಳಿಯ ಜಂಗಮರಿಗಿಂತ ಆಳವಾದ ಜ್ಞಾನ ಇರಬಹುದೇ ಹೊರತು ಅವರನ್ನು ಟೀಕಿಸುವ ಅಧಿಕಾರ ನಮ್ಮ ಗುರು ಪರಂಪರೆಗೆ ಮಾತ್ರ ವಿದೆ ಬೇರೆ ಯಾರಿಗೂ ಇಲ್ಲ. ಬೇರೆ ಧರ್ಮದ ಬಗ್ಗೆ ನಮಗೂ ಚನ್ನಾಗಿ ಗೊತ್ತಿದೆ ಎಂದ ಮಾತ್ರಕ್ಕೆ ಅವರ ಆಚರಣೆಯ ಲೋಪ ದೋಷ ತಿದ್ದಲು ನಮಗೆ ಅಧಿಕಾರವಿಲ್ಲ. ಹಾಗೆಯೇ ಲಿಂಗ ಆಯತ ಮಾಡಿಕೊಳ್ಳದವರು ವೀರಶೈವ ಧರ್ಮದ ಬಗ್ಗೆ ಅಲ್ಲಿರುವ ಕೆಲ ಲೋಪ ದೋಷಗಳ ಬಗ್ಗೆ ಮಾತನ್ನಾಡಿದರೆ ಯಾವನೋ ಯಾವದೋ ಧರ್ಮದ ಬಗ್ಗೆ ಮಾತಾಡಿದಂತಾಗುತ್ತದೆ.ಯಾರಾದರು ಮಾತನಾಡುವವರು ಜಂಗಮರ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇಂದ ಮಾತಾಡಲಿ ಮಾನವ ಧರ್ಮಕ್ಕೆ ಜಯವಾಗಲಿ ಧರ್ಮ ದಿಂದಲೇ ವಿಶ್ವಕ್ಕೆ ಶಾಂತಿ. ಪಂಚಾಚಾರ್ಯ ರಿಗೆ ಜಯವಾಗಲಿ ಜಂಗಮ ಪ್ರೇಮಿ ಅಣ್ಣ ಬಸವಣ್ಣನವರಿಗೆ ಜಯವಾಗಲಿ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ