ಗುರುವಾರ, ಅಕ್ಟೋಬರ್ 31, 2013

ಈ ವೀರಶೈವ ಧರ್ಮ ಒಡೆಯಲು ಬಿಡುವುದಿಲ್ಲ.

ಆತ್ಮೀಯರೇ ..... 
ಜಂಗಮ ಸಮುದಾಯ ಜಾತಿಯೂ ಅಲ್ಲ ಒಳ ಪಂಗಡವೂ ಅಲ್ಲ ಈ ಜಂಗಮರು ವೀರಶೈವ ಧರ್ಮದ ಪ್ರಥಮ ಪ್ರಜೆಗಳು. ಜಂಗಮನಿಲ್ಲದ ವೀರಶೈವ ಧರ್ಮ ನೆನಸಿಕೊಳ್ಳಲು ಸಾಧ್ಯವೇ ಇಲ್ಲ.ಧರ್ಮದ ಪದ್ಧತಿಯಂತೆ ಜಂಗಮ ದೀಕ್ಷೆಯಾಗಿ ಭಕ್ತ ವರ್ಗಕ್ಕೆ ಲಿಂಗ ಧಾರಣೆ ಮಾಡಲು  ವೀರಶೈವ ಧರ್ಮದ ಜಗದ್ಗುರುಗಳವರಿಂದ ಧರ್ಮದ  ಸಂವಿಧಾನ ಬದ್ಧ ಅಧಿಕಾರವನ್ನು ಪಡೆದುಕೊಂಡು ಧರ್ಮದ ಆಚರಣೆಗಳನ್ನು ಉಳಿಸಿಕೊಂಡು ಬಂದ ಧಮಾಧಿಕಾರಿ ಈ ಜಂಗಮ. ಕರ್ನಾಟಕದಲ್ಲಿ  ಬಹುಸಂಖ್ಯಾತರು ಭಾರತದಲ್ಲಿ ಅಲ್ಪ ಸಂಖ್ಯಾತರಾಗಿರುವ ಈ ವೀರಶೈವ ರೆಲ್ಲರಿಗೂ ಹುಟ್ಟಿದ ದಿನವೇ ಅವರ ಮನೆಗೆ ಹೋಗಿ ಲಿಂಗ ದಾರಣೆ ಮಾಡಿ ಲಿಂಗವಂತನನ್ನಾಗಿ ಮಾಡಿ ವೀರಶೈವ ದರ್ಮವನ್ನು ರಕ್ಷಿಸಿಕೊಂಡು ಬಂದ ಧರ್ಮ ರಕ್ಷಕ ಈ ಜಂಗಮ ನೇ ಹೊರತು ಬೇರೆ ಯಾರು ಅಲ್ಲ ನಾವು ಲಿಂಗಾಯತರು ನಾವು ವೀರಶೈವರು ಎಂದು ಹೊಡೆದಾಡುತ್ತಿರುವ ಅಥವಾ ಪ್ರತ್ಯೇಕ ಅಸ್ತಿತ್ವಕ್ಕಾಗಿ ಪರಿತಪಿಸುತ್ತಿರುವವರು ಈ ಜಂಗಮರನ್ನು ಸ್ಮರಿಸಿಕೊಳ್ಳಲೇಬೆಕು ಯಾಕಂದರೆ ಇವರೆಲ್ಲರಿಗೂ ಲಿಂಗ ಕಟ್ಟಿದವರೇ ನಾವು. ತಮ್ಮ ತಮ್ಮ ಹಿಂಬಾಲಕರಿಗೆ ಲಿಂಗ ಧಾರಣೆ ಮಾಡದ ಇವರು ಅವರ ನಾಯಕರಾದರು ಹೇಗಾಗಲು ಸಹಾಧ್ಯ. ಪ್ರತ್ಯೇಕವಾದಿಗಳು ನೆನಪಿಟ್ಟು ಕೊಳ್ಳಲಿ ನಿಮ್ಮ ಹಿಂಬಾಲಕರಂದು ನಿಮ್ಮ ಮಾತಿಗೆ ಮರುಳಾಗಿ ನಿಮ್ಮ ಹಿಂದೆ ಬಂದಿದ್ದಾರಲ್ಲ ಅವರೆಲ್ಲರಿಗೂ ಲಿಂಗ ಕಟ್ಟಿದವರು ನಾವು.ಹಾಗೆ ವಿಚಾರ ಮಾಡಿದರೆ ನಿಮಗೂ ಕೂಡಾ ಲಿಂಗ ಕಟ್ಟಿದವರು ನಾವೇ.. .ಸರಿಯಾದ  ತಿಳುವಳಿಕೆ ನೀಡದ ಕಾರಣ ನಿಮ್ಮನ್ನು ಹಿಂಬಾಲಿಸುತಿದ್ದರೆ ನಮಗೂ ತಲೆ ಕೆಟ್ಟಿದೆ ನಾವು ಇನ್ನು ಸುಮ್ಮನಿರಲು ಸಾಧ್ಯವಿಲ್ಲ ಮನೆ ಮನೆಗೆ ಹೋಗುತ್ತೇವೆ ತಿಳುವಳಿಕೆ ನೀಡುತ್ತೆವೆ ಜನ ಜಾಗೃತಿ ಮೂಡಿಸುತ್ತೆವೆ ಈ ವೀರಶೈವ ಧರ್ಮ ಒಡೆಯಲು ಬಿಡುವುದಿಲ್ಲ. ನಿಮ್ಮದೆನಿದ್ದರು ಮಾದ್ಯಮಗಳ ಮುಂದೆ ಮಾತ್ರ ಹಳ್ಳಿಗೆ ಬಂದರೆ ನಿಮಗೆ ಸರಿಯಾಗಿ ಬುದ್ದಿ ಹೇಳುತ್ತೇವೆ ಇದು ನಿಮಗೆ ಗೊತ್ತಿದ್ದೇ ನೀವು ಹಳ್ಳಿಗಳಿಗೆ ಕಾಲು ಇಟ್ಟಿಲ್ಲ ಇಡುವುದು ಇಲ್ಲ ಇಡಲು ನಾವು ಬಿಡುವುದು ಇಲ್ಲ.ನೀವೆಲ್ಲ ನಮ್ಮ ಮುಂದಿನ ಕೂಸುಗಳು ನಾವು ಸಾವಿರ ಸಾವಿರ ವರ್ಷ ಗಳಿಂದಲೂ ಬಂದವರು ನಮಗೆ ನೀವು ತೃಣ ಸಮಾನರು. ಸಮಸ್ತ ವೀರಶೈವ ಸಮಾಜ ಬಾಂಧವರೆ ಗುರು ವಿರಕ್ತರು ನಮ್ಮ ಧರ್ಮದ ಎರಡು ಕಣ್ಣುಗಳು ಅವುಗಳನ್ನು ಚನ್ನಾಗಿ ನೋಡಿಕೊಳ್ಳುವುದು ನಮ್ಮ ಧರ್ಮ ಈ ಗುರು ವಿರಕ್ತರ ಸಣ್ಣ ಪುಟ್ಟ ಭಿನ್ನಾಭಿಪ್ರಾಯ ಅವರೇ ಬಗೆ ಹರಿಸಿ ಕೊಳ್ಳುತ್ತಾರೆ ಅವರಿಗೆ ಬಿಟ್ಟು ಬಿಡಿ ಬಗೆ ಹರಿಸಲು ತಿಳಿ ಹೇಳಿ ಬೀದಿಗಿಳಿದು ಹೋರಾಡಲು ಬಿಡಬೇಡಿ. ಗುರು ವಿರಕ್ತ ಪರಂಪರೆ ಹೊರತು ಪಡಿಸಿ ಇನ್ನೊಂದು ಯಾವದೇ ಪಂಗಡ ಹುಟ್ಟುಹಾಕಬೇಡಿ ಆಸೆ ಆಮಿಷಕ್ಕೆ ಬಲಿಯಾಗಿ ಕೊಲೆ ಬಸವರಾಗಬೇಡಿ ಬಸವಣ್ಣ ಬರಿ ನಮ್ಮ ಆಸ್ತಿ ಎಂದು ಕೆಲವೇ ಕೆಲವರು ಬಸವಣ್ಣ ನವರನ್ನು ಬಂಡವಾಳವಗಿಸಿಕೊಳ್ಳಲು ಬಿಡಬೇಡಿ ಮುಂದಿನ ನಮ್ಮ ಪೀಳಿಗೆ ನಮ್ಮನ್ನು ಶಪಿಸುವಂತಾಗದಂತೆ ಎಚ್ಚರಿಕೆವಹಿಸಿ ಇದು ನಮ್ಮ ವಿನಂತಿ ಅಲ್ಲ ಆಜ್ಞೆ.ವೀರಶೈವನಮ್ಮ ಹೊಣೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ