ಶನಿವಾರ, ನವೆಂಬರ್ 9, 2013

ಜಂಗಮ ಆರಾಧನೆಯೇ ವೀರಶೈವ ಧರ್ಮದ ಜೀವಾಳ.

ವಿಶ್ವಧರ್ಮವಾದ ವೀರಶೈವ ಧರ್ಮದ ಪ್ರಚಾರಕ ಪ್ರಸಾರಕ ಮತ್ತು ರಕ್ಷಕ ಪ್ರಥಮ ವ್ಯೆಕ್ತಿ ಮತ್ತು ವರ್ಗವೆಂದರೆ ಜಂಗಮ ಮತ್ತು ಜಂಗಮ ಸಮಾಜ. ಕೆಲವು ಅಜ್ಞಾನಿಗಳು ಈ ಜಂಗಮ ಸಮುದಾಯಕ್ಕೆ ಜಾತಿಯ ಪಟ್ಟ ಕಟ್ಟುತ್ತಿದ್ದಾರೆ. ಜಂಗಮ ಒಂದು ಜಾತಿಯಲ್ಲ ಅದು ಒಂದು ತತ್ವ. ಧರ್ಮದ ರಕ್ಷಣೆಗಾಗಿ ವೀರಶೈವ ಧರ್ಮದ ಸಂವಿಧಾನದಂತೆ ಧರ್ಮಾದಿಕಾರಿಗಳಿಂದ ಧರ್ಮ ರಕ್ಷಣೆಯ ಧೀಕ್ಷೆ ಪಡೆದು ಧರ್ಮದ ಪ್ರಾಥಮಿಕ ಆಚರಣೆಯ ಸಂಸ್ಕಾರ ನೀಡಲು ಸಂಪೂರ್ಣವಾಗಿ ಸಮರ್ಪಿಸಿಕೊಂಡ ತ್ಯಾಗ ಜೀವಿ ವೀರ ವಿರಾಗಿ ಈ ಜಂಗಮರು. ಒಂದು ಅರ್ಥದಲ್ಲಿ ಪ್ರಾಥಮಿಕ ಶಿಕ್ಷಕನಿದ್ದ ಹಾಗೆ. ಒಬ್ಬ ವ್ಯೆಕ್ತಿಯ ಶೈಕ್ಷಣಿಕ ಸಾಧನೆಯಲ್ಲಿ ಪ್ರಾಥಮಿಕ ಶಾಲೆಯ ಶಿಕ್ಷಕನ ಪಾತ್ರ ಎಷ್ಟು ಮುಖ್ಯವೋ ಧಾರ್ಮಿಕ ಕ್ಷೇತ್ರದಲ್ಲಿ ಈ ಜಂಗಮನ ಪಾತ್ರವೂ ಅಷ್ಟೇ ಮುಖ್ಯವಾದದ್ದು. ಒಬ್ಬ ವ್ಯೆಕ್ತಿಯ ಜೀವನದಲ್ಲಿ ಶಿಕ್ಷಕನ ಪಾತ್ರದ ಮಹತ್ವ ನೆನಪಿಸಿಕೊಳ್ಳಲು, ಸ್ವತಂತ್ರ ಭಾರತದ ಪ್ರಥಮ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣರು ತಮ್ಮ ಜನ್ಮದಿನದ ಬದಲಿಗೆ ಶಿಕ್ಷಕರ ದಿನಾಚರಣೆಯನ್ನು ಆರಂಭಿಸಿ ಶಿಕ್ಷನಿಗೆ ಗೌರವ ಸಲ್ಲುವಂತೆ ಮಾಡಿ ಶಿಕ್ಷಕನ ಮಹತ್ವ ಸಾರಿದರು. ಅದೇ ರೀತಿ ಭಕ್ತಿ ಭಂಡಾರಿ ಬಸವಣ್ಣನವರು ನಿತ್ಯ ಜಂಗಮ ಆರಾಧಕರಾಗಿ ತಮ್ಮನ್ನು ಅನುಸರಿಸುವವರಿಗೆ ಜಂಗಮ ಆರಾಧನೆ ಕಡ್ಡಾಯವಾಗಿಸಿದ್ದರು ಮಾತ್ರವಲ್ಲದೆ ತಮ್ಮ ಜೀವನದ ಉದ್ದಕ್ಕೂ ಜಂಗಮ ಆರಾಧನೆ ನಡೆಸಿಕೊಂಡು ಬಂದರು. ಜಂಗಮ ಆರಾಧನೆಯೇ ವೀರಶೈವ ಧರ್ಮದ ಜೀವಾಳ. ಜಂಗಮ ಆರಾಧನೆ ಇಲ್ಲವಾದರೆ ಧರ್ಮ ಉಳಿಯಲು ಸಾಧ್ಯೆವೇಯಿಲ್ಲ ಆದರೆ ಇಂದು ನಿತ್ಯ ಜಂಗಮ ತೃಪ್ತಿ  ಬದಲು ನಿತ್ಯ ಜಂಗಮ ನಿಂದೆಯಾಗುತ್ತಿದೆ ನಿತ್ಯತೃಪ್ತಿ ಮಾಡುತ್ತಿದ್ದ ಬಸವಣ್ಣನವರನ್ನು ಭಂಡವಾಳವಾಗಿಸಿ ಕೊಂಡ ಕೆಲವು ಬಸವ ತತ್ವ ವ್ಯಾಪಾರಿಗಳು ಜಂಗಮರನ್ನು ವಿರೋಧಿಸುತಿದ್ದಾರೆ. ಅಂಥಹ ಕೆಲವರಿಗೆ ನಾವು ಕೇಳುವುದು ಇಷ್ಟೇ ಮೊದಲು ನೀವು ಲಿಂಗಾಯತರು ಎಂಬುದನ್ನು ಮೊದಲು ಶಿದ್ಧ ಪಡಿಸಿ ಸ್ವತಂತ್ರ ಧರ್ಮದ ಹಕ್ಕು ಸ್ಥಾಪಿಸಲು ಮುಂದಾಗಿ .  ಬಸವಣ್ಣನವರ ವಚನ ಚನ್ನಾಗಿ ಪ್ರವಚನ ಮಾಡುವದಕ್ಕೆ ಬಂದಮಾತ್ರಕ್ಕೆ ಅಥವಾ ನಿಮ್ಮ ಮರುಳು ಮಾತಿಗೆ ಮರುಳಾಗಿ ಹಣದಾಸೆಗಾಗಿ ನಿಮ್ಮನ್ನು ಹಿಂಬಾಲಿಸುವವರನ್ನು ಕಟ್ಟಿಕೊಂಡು ಮಾಧ್ಯಮಗಳ ಮುಂದೆ ಮಾತಾಡಿದರೆ ಸಾಕಾ?  ಸಮಾಜ ಬಾಂಧವರೇ ದಯಮಾಡಿ ಗಮನಿಸಿ ನಮ್ಮ ಮನೆಯೊಳಗೇ ಆಸ್ತಿಯಲ್ಲಿ ಪಾಲು ಬೇಡಲು ನಮಗೆ ಯಾವುದಾದರು ಹಕ್ಕು ಇರಬೇಕಲ್ಲವೇ ? ಯಾವುದಾದರು ಸಂಬಂದ ಹೊದಿಲ್ಲದವರಿಗೆ ಪಾಲು ಕೊಡಲು ಸಾಧ್ಯವೇ ? ದುಡ್ಡು ಇದೆಯಂದು ಎಲ್ಲಿ ಬೇಕಲ್ಲಿ ಹೊಲ ಖರಿದಿ ಮಾಡ ಬೇಕಾದರೆ ಆವ್ಯೆಕ್ತಿ ಹೆಸರಲ್ಲಿ ಎಲ್ಲಿಯಾದರೂ ಭೂಮಿ ಇರಲೇ ಬೇಕು ಅವನ ವಂಶಸ್ಥರಾದು ಕೃಷಿಕರಾಗಿರಬೇಕು ಎಂಬ ಕಾನೂನು ಇದೆ ಇಲ್ಲದಿದ್ದರೆ ಎಷ್ಟೇ ದುಡ್ಡುಕೊಟ್ಟರು ಭೂಮಿ ಹಕ್ಕುದಾರನಾಗುವುದಿಲ್ಲ ಹಾಗೆಯೇ ನಮ್ಮಲ್ಲಿ ಗುರು ವಿರಕ್ತರು ಎಂಬ ದಾಯದಿಗಲಿದ್ದೇವೆ ಇಲ್ಲಿ ಹಕ್ಕು ಮಂಡನೆ ಆಸ್ತಿ ಪಾಲು ಇವರಲ್ಲೇ ಯಾಗಬೇಕು ಮಾತೆ ಮಾದೇವಿ ಮತ್ತು ಅವರ ಹಿಂಬಾಲಕರಿಗೆ ಲಿಂಗಾಯತ ಸ್ವತಂತ್ರ ಹಕ್ಕು ಮಂಡನೆಗೆ ಅಧಿಕಾರವೇ ಇಲ್ಲ.  ಮಾತೆ ಮಾದೇವಿ ಮತ್ತವರ ಹಿಬಾಲಕರು ಲಿಂಗಾಯತರೇ ಅಲ್ಲ ಅದಕ್ಕಾಗಿ ಮಾದ್ಯಮಗಳು ಅವರ ಪುಡಿಕಾಸಿಗಾಗಿ ಪ್ರಚಾರ ಕೊಡಬಾರದು . ವಿರಕ್ತರಲ್ಲೇ ಕೆಲವು ಪ್ರಗತಿಪರ ಸ್ವಾಮೀಜಿಗಳು ಬೇಕಾದರೆ ಸ್ವತಂತ್ರ ಧರ್ಮದ ಹಕ್ಕು ಮಂಡಿಸಲಿ. ಈ ವಿರಕ್ತ ಮಠದ ಪೂಜ್ಯರಿಂದ ದೀಕ್ಷೆ ಪಡೆದು ಆಸ್ವತಂತ್ರ ಸ್ವೀಕರಿಸಲಿ ಆಮೇಲೆ ಬೇಕಾದರೆ ಹಕ್ಕು ,ಮಂಡನೆ ಮಾಡಲಿ. ಮಾತೆ ಮಾದೆವಿಯವರಿಗೆ ನಾವು ಕೇಳುವುದೆಂದರೆ ನೀವು ಯಾರು ನಿಮ್ಮ ಸ್ವತಂತ್ರ ಧರ್ಮದಲ್ಲಿ ನಿಮ್ಮ ಸ್ಥಾನೆವೇನು ಬಸವಣ್ಣ ನವರು ನಿಮ್ಮಂತೆ ಯಾವದೇ ಸಂಧರ್ಭದಲ್ಲಿ ತಮ್ಮನ್ನು ತಾವು ಗುರು ಜಗದ್ಗುರು ಎಂದು ಕೊಂಡಿರಲಿಲ್ಲ ಎನ್ನುವದು ನಿಮಗೆ ತಿಳಿದಿಲ್ಲವೇ ಅಲ್ಲಮ ಪ್ರಭುವನ್ನು ಜಗದ್ಗುರುವಾಗಿ ಮಾಡಿರಲಿಲ್ಲವೇ ಹಾಗೆ ನೀವು ಯಾರಿಗಾದರು ಜಗದ್ಗುರುವಾಗಿ ಯಾಕೆ ಮಾಡಲಿಲ್ಲ ? ಈಗ ನಿಮ್ಮ ಪ್ರವಚನದ ಚಾರ್ಮ ಕಡಿಮೆಯಾಗಿದೆ ನಿಮಗಿಂತ ಚನ್ನಾಗಿ ಯಾಮರಿಸುವ ಕಲೆ ಬಲ್ಲವರು ಬಹಳ ಜನರು ಈಗ ಹೆಚ್ಚಾಗಿದ್ದರೆ ಅದಕ್ಕಾಗಿ ನೀವು ನಿಮ್ಮ ಇರುವಿಕೆ ಸಾಬೀತು ಪಡಿಸಿಕೊಳ್ಳಲು ಈ ನಾಟಕ ಸುರು ಹಚ್ಚಿಕೊಂಡಿದ್ದಿರಿ ಅಂತ ನಿಮ್ಮವರೇ ಆಡಿ ಕೊಳ್ಳುತ್ತಿದ್ದರಲ್ಲ ಅವರಿಗೆ ನಿಮ್ಮ ಉತ್ತರವೇನು ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ