
ಅಖಿಲ ಭಾರತ
ವೀರಶೈವ ಜಂಗಮ ಸಮಾಜ ಮಹಾಸಭಾ
ನಿಭಂದನಾ ಪತ್ರಿಕೆ
===================
1) ಸಂಸ್ಥೆಯ ಹೆಸರು : ಅಖಿಲ ಭಾರತ ವೀರಶೈವ ಜಂಗಮ ಸಮಾಜ ಮಹಾಸಭಾ
2) ನೊಂದಾಯಿತ ಕಚೇರಿ ಸಂಪೂರ್ಣ ವಿಳಾಸ :
3) ಸಂಸ್ಥೆಯ ವ್ಯಾಪ್ತಿ : ಭಾರತ ದೇಶವನ್ನು ಒಳಗೊಂಡಿರುತ್ತದೆ.
4) ಸದಸ್ಯತ್ವ ವರ್ಗೀಕರಣ ಹಾಗೂ ಶುಲ್ಕ ವಿವರ : ಈ ಮಹಾ ಸಭೆಯ ಸದಸ್ಯತ್ವ 5 ವಿಧದಲ್ಲಿ ವರ್ಗೀಕರಿಸಲಾಗಿದೆ
1. ಸಾಮನ್ಯ ಸದಸ್ಯತ್ವ 2. ಅಜೀವ ಸದಸ್ಯತ್ವ 3. ದಾನಿಗಳು 4. ಪೋಷಕರು 5. ಮಹಾಪೋಷಕರು. ಸದಸ್ಯತ್ವ ಶುಲ್ಕವಿವರ : 1) ಸಾಮನ್ಯ : ವ್ಯೆಕ್ತಿಗೆ 51/-ರೂ. ಕುಟುಂಬಕ್ಕೆ 108/-ರೂ. 2)ಆಜೀವ : ವ್ಯೆಕ್ತಿಗೆ 251/-ರೂ. ಕುಟುಂಬಕ್ಕೆ 501/-ರೂ.
3) ದಾನಿಗಳು : ವ್ಯೆಕ್ತಿಗೆ 1008/-ರೂ. ಕುಟುಂಬಕ್ಕೆ 2501/-ರೂ.4) ಪೋಷಕರು : ವ್ಯೆಕ್ತಿಗೆ 5,555/-ರೂ. ಸಂಘ-ಸಂಸ್ಥೆಗಳಿಗೆ 11,111/- ರೂ.5) ಮಹಾಪೋಷಕರು : ವ್ಯೆಕ್ತಿಗೆ 11,111/- ರೂ. ಸಂಘ-ಸಂಸ್ಥೆಗಳಿಗೆ 21,111/- ರೂ. ಪೀಠಾಧೀಶರಿಗೆ 51,551/-ರೂ . ಪ್ರವೇಶ ಶುಲ್ಕ : 10/-ರೂ.
5) ಸಂಸ್ಥೆಯ ಸದಸ್ಯತ್ವ ಪಡೆಯುವ ವಿಧಾನ : 2) ಈ ಸಮಿತಿಯ ಸದಸ್ಯರಾಗಲು ಕನಿಷ್ಟ 18 ವರ್ಷ ವಯಸ್ಸು ಪೂರ್ಣವಾಗಿರಬೇಕು. ರಾಜ್ಯದ ಹೊರರಾಜ್ಯದ ದೇಶ ವಿದೇಶದ ವೀರಶೈವ ಜಂಗಮರು ಕೂಡಾ ಸದಸ್ಯರಾಗ ಬಹುದುರಾಜ್ಯದ ಹೊರಗಿನವರಿಗೆ ಕಾರ್ಯಕಾರಣಿ ಮಂಡಳಿಯಲ್ಲಿ ಪದಾದಿಕಾರಿ ಯಾಗಲು ಅವಕಾಶ ಇರುವುದಿಲ್ಲ ಸಲಹಾಸಮಿತಿಯಲ್ಲಿ ನೇಮಕ ಮಾಡಿಕೊಳ್ಳ ಬಹುದು. ಆದರೆ ಕರ್ನಾಟಕದ ಹೊರಗಿನವರುಶಾಖೆಗಳನ್ನು ಸ್ಥಾಪಿಸಿ ಕೊಳ್ಳಬಹುದು.2) ಸಮಿತಿಯ ರಚನಾತ್ಮಕ ಕಾರ್ಯಕ್ರಮಗಳಲ್ಲಿ ವಿಶ್ವಾಸ, ನಿಷ್ಠೆಯುಳ್ಳವರಾಗಿರಬೆಕು. 3) ಉತ್ತಮ ಚಾರಿತ್ರ್ಯೆ ಹೊಂದಿರುವ ಧರ್ಮದಲ್ಲಿ ನಿಷ್ಠೆಯುಳ್ಳವರು ಪರಂಪರೆಯನ್ನು ಗೌರವಿಸುವವರುಆಗಿರಬೇಕು. ವೀರಶೈವ ಧರ್ಮ ದವರಾಗಿರಬೇಕು.
6) ಸಂಸ್ಥೆಯ ಸದಸ್ಯತ್ವ ಪಡೆಯುವ ವಿಧಾನ : ಈ ಮಹಾಸಭೆಯ ಸದಸ್ಯರಾಗಬೇಕೆನ್ನುವವರು ನಿಗದಿಪಡಿಸಿದ ಅರ್ಜಿ ನಮೂನೆಯಲ್ಲಿ ವಿವರ (ಅಪೇಕ್ಷಾ ಪತ್ರ ) ತುಂಬಿ ಸದಸ್ಯತ್ವ ವಂತಿಕೆ ಹಣದೊಂದಿಗೆ ರೂಪಾಯಿ ೨೫-೦೦ ಪ್ರವೇಶ ಧನದೊಂದಿಗೆ ಕೊಡತಕ್ಕದ್ದು. ಕಾರ್ಯಕಾರಣಿ ಮಂಡಳಿಯು ಅಪೇಕ್ಷ ಪತ್ರವನ್ನು ಪರಿಶೀಲಿಸಿ ಒಪ್ಪಬಹುದು ಇಲ್ಲವೇ ತಿರಸ್ಕರಿಸಬಹುದು ತಿರಸ್ಕೃತ ಅರ್ಜಿದಾರರ ವಂತಿಕೆ ಹಣವನ್ನು ಹಿಂದುರಿಗಿಸಲಾಗುವುದು ಅದರೆ ಪ್ರವೇಶ ಶುಲ್ಕ ವಾಪಸು ಕೊಡುವುದಿಲ್ಲ.
7) ಸದಸ್ಯತ್ವ ರದ್ದಾಗುವಿಕೆ : ಈ ಕೆಳಕಂಡ ಕಾರಣಗಳಿಂದ ಸದಸ್ಯತ್ವ ರದ್ದಾಗುತ್ತದೆ.1) ಸದಸ್ಯರು ಮರಣಹೊಂದಿದರೆ.
2) ಊರು ಬಿಟ್ಟು ಹೋದರೆ 3) ಬುದ್ದಿ ಬ್ರಮಣೆಯಾದರೆ 4) ರಾಜಿನಾಮೆ ಕೊಟ್ಟರೆ 5) ಹೆಚ್ಚಿನವಧಿಗೆ ವಂತಿಕೆ ಸಲ್ಲಿಸದಿದ್ದರೆ
6) ಯಾವದೆವರ್ಗದ ಸದಸ್ಯತ್ವವು ಅವರ ದುರ್ನಡತೆಗೆ , ಅನೈತಿಕ ವರ್ತನೆ ಬಗ್ಗೆ ಇಲ್ಲವೇ ಮಹಾ ಸಭೆಯ ಹಿತಾಸಕ್ತಿಯ ವಿರುಧ್ಧವಾದ ನಡವಳಿಕೆಗಳ ಆರೋಪದ ಮೇರೆಗೆ ಮಹಾಸಭೆಯ ಸಾಮಾನ್ಯ ಸಭೆಯಲ್ಲಿ ಹಾಜರಿದ್ದ 2:3 ಭಾಗ ಸದಸ್ಯರು ಅನುಮತಿಕೊಟ್ಟಲ್ಲಿ ರದ್ದಗುವುದು. ಆದರೆ ಮಹಾಸಭೆಯು ಸಭೆ ಸೇರುವ ಮೊದಲು ಅಪಾದಿತ ಸದಸ್ಯರಿಗೆ ಅವರ ವಿರುದ್ಧ ಇರುವ ಅಪಾದನೆಗಳ ವಿವರ ಕೊಟ್ಟು ಲಿಖಿತ ವಿವಿರಣೆ ಸಲ್ಲಿಸಲು ಅವಕಾಶವಿರುತ್ತಕ್ಕದ್ದು ಮತ್ತು ಯೋಗ್ಯ ಕಾಲಾವಧಿ ಕೊಡತಕ್ಕದ್ದು. ಮಹಾಸಭೆಯ ಸಾಮಾನ್ಯ ಸಭೆಯಲ್ಲಿ ಆಪಾದನೆ ಪಟ್ಟಿ ಮತ್ತು ಆಪಾದಿತ ಸದಸ್ಯನ ವಿವರರಣೆ ಹಾಜರ ಪಡಿಸತಕ್ಕದ್ದು. ಇಲ್ಲವೆ ಸದಸ್ಯರಿಗೆ ತಮ್ಮ ಅಭಿಪ್ರಾಯವನ್ನು ಸಭೆಯಲ್ಲಿ ಹೇಳಿಕೊಳ್ಳುವ ಅವಕಾಶವಿರತಕ್ಕದ್ದು. ಆದರೆ ನಿರ್ಣಯ ಕೈಗೊಳ್ಳುವಾಗ ಅಂತ ಸದಸ್ಯನು ಸಭೆಯಿಂದ ಹೊರಗೆ ಇರತಕ್ಕದ್ದು. ಸಾಮಾನ್ಯ ಶೆಯ ನಿರ್ಣಯವೇ ಅಖೈರು ಆಗಿರುತ್ತದೆ.
8) ಆರ್ಥಿಕ ಸಂಪತ್ತು : ಮಹಾಸಭೆಯ ಕಾರ್ಯಕ್ಕೆ ಬೇಕಾಗುವ ಆರ್ಥಿಕ ಸಂಪತ್ತನ್ನು ಈ ರೀತಿಯಲ್ಲಿ ಸಂಗ್ರಹಿಸಬಹುದು 1)
ಸದಸ್ಯರಿಂದ ಬಂದ ವಂತಿಕೆ 2) ಸಾರ್ವಜನಿಕರಿಂದ ಸಂಘ ಸಂಸ್ಥೆಗಳಿಂದ ಕಾಣಿಕೆ ದೇಣಿಗೆ ಅನುದಾನದಿಂದ 3)ಸಮಾಜದ ಅಭಿವೃದ್ಧಿಗಾಗಿ ರಾಜ್ಯ ಮತ್ತು ಕೇಂದ್ರ ಸರಕಾರಗಳಿಂದ, ಮಾನ್ಯಮಾಡಿದ ಬ್ಯಾಂಕುಗಳಿಂದ, ಹಣಕಾಸು ಸಂಸ್ಥೆಗಳಿಂದ ,ವಿದೇಶದಲ್ಲಿ ನೆಲಸಿದ ಭಾರತೀಯರಿಂದ, ಶಾಸಕ ಸಂಸದ ರಾಜ್ಯಸಭಾ ಸದಸ್ಯರ ಅನುದಾನದಿಂದ, 4) ಮಹಾಸಭೆಯ ನ್ಯಾಯ ಸಮ್ಮತವಾದ ವ್ಯವಹಾರದಿಂದ, ವೀದೆಶಿ ಸಂಘ ಸಂಸ್ಥೆಗಳಿಂದ ಹಣ ಸಹಾಯ ಪಡೆಯುವುದು, 5) ಆದಾಯಕರ ಕಾನೂನಿನಡಿಯಲ್ಲಿ 80ಜಿ ಅಡಿಯಲ್ಲಿ ಮಾನ್ಯತೆ ಪಡೆಯುವುದು, ಸಂಘ ಸಂಸ್ಥೆಗಳಿಗೆ ನಿಗದಿಪಡಿಸಿದ ನಿಯಮಗಳ ಅನ್ವಯ ಕಾರ್ಯ ನಿರ್ವಹಿಸುವುದು.
9) ಸಾಮಾನ್ಯ ಸಭೆ ಅಧಿಕಾರ ಮತ್ತು ಕಾರ್ಯವ್ಯಾಪ್ತಿ : ಈ ಮಹಾಸಭೆಗೆ ಒಂದು ಸಾಮಾನ್ಯ ಸಭೆ ಇರತಕ್ಕದ್ದು,
9) ಸಾಮಾನ್ಯ ಸಭೆ ಅಧಿಕಾರ ಮತ್ತು ಕಾರ್ಯವ್ಯಾಪ್ತಿ : ಈ ಮಹಾಸಭೆಗೆ ಒಂದು ಸಾಮಾನ್ಯ ಸಭೆ ಇರತಕ್ಕದ್ದು,
ಸಾಮಾನ್ಯ ಸಭೆಯಲ್ಲಿ ಪ್ರತಿಯೊಬ್ಬ ಸದಸ್ಯರು ಭಾಗವಹಿಸಲು ಹಕ್ಕು ಉಳ್ಳವರಾಗಿರುತ್ತಾರೆ. ಈ ಸಾಮಾನ್ಯ ಸಭೆಯು ಮಾಹಾಸಬೆಯ ಎಲ್ಲ ಕಾರ್ಯಕ್ರಮಗಳ ನಿಯಂತ್ರಣಕ್ಕೆ ಪರಮೋಚ್ಚ ಅಧಿಕಾರ ಹೊಂದಿರುತ್ತದೆ.
- ಸಮಿತಿಯ ಸದಸ್ಯರ ಪಟ್ಟಿಯಲ್ಲಿ ಸೇರ್ಪಡೆಯಾದಂತಹ ಸದಸ್ಯರು ಮಾತ್ರ ಮತದಾನದ ಹಕ್ಕು ಹೊಂದಿರುತ್ತಾರೆ. ಈ ನಿಯಮ ಪ್ರಥಮ ಸಾಮಾನ್ಯ ಸ್ಭೆಯಿಂದಲೇ ಅನ್ವಯವಾಗಿರುತ್ತದೆ. ಸಾಮಾನ್ಯ ಸಭೆಯು ಪ್ರತಿ ವಾರ್ಷಿಕ ವರ್ಷಕ್ಕೆ ಒಂದು ಸಲವಾದರೂ ತಪ್ಪದೇ ಕರ್ಯತಕ್ಕದ್ದು ಅದು ಸಂಸ್ಥೆಯ ವಾರ್ಷಿಕ ವರ್ಷ ಮುಗಿದ ಆರು ತಿಂಗಳ ಒಳಗಾಗಿ ಇರತಕ್ಕದ್ದು.
- ಮೂರು ವರ್ಷಕ್ಕೊಮ್ಮೆ ಕಾರ್ಯಕಾರಿ ಮಂಡಳಿಯ ಸದಸ್ಯರನ್ನು ಚುನಾಯಿಸುವ ಮೂಲಕ ಸಾಮಾನ್ಯ ಸಭೆ ನಿರ್ಧರಿಸಿದಂತೆ ಕಾರ್ಯಕಾರಿ ಮಂಡಳಿ ಸದಸ್ಯರಿರತಕ್ಕದ್ದು.
- ಹಿಂದಿನ ವರ್ಷದ ಆರ್ಥಿಕ ಸ್ಥಿತಿ ನಿರ್ಮಿಸುವುದು ಆಡಿಟ್ ಆದ ಲೆಕ್ಕ ಪತ್ರಗಳನ್ನು ಪರಿಸಿಲಿಸಿ ಒಪ್ಪಿಗೆ ಕೊಡುವುದು.
- ಚಾಲ್ತಿ ವರ್ಷದ ಅಂದಾಜು ಜಮ ಖರ್ಚಿನ ಪಟ್ಟಿ ಹಾಗೂ ಯೋಜನೆಗಳಿಗೆ ವಿವರಗಳನ್ನು ಪರಿಶೀಲಿಸಿ ಒಪ್ಪಿಗೆ ಕೊಡುವುದು.
- ಸಂಸ್ಥೆಯ ಲೆಕ್ಕ ಪತ್ರಗಳನ್ನು ರಜಿಸ್ಟರ್ಡ ಚಾರ್ಟೆಡ್ ಅಕೌಂಟೆಂಟ ರವರ ಕಡೆಯಿಂದ ಪ್ರತಿ ವರ್ಷವೂ ತಪಾಸಣೆ ಮಾಡಿಸಬೇಕು ಆಡಿಟ್ ಪತ್ರಿಕೆ ಮತ್ತು ಆಡಿಟ್ ರವರು ಆ ಬಗ್ಗೆ ಸಲ್ಲಿಸಿದ ವಿವರವಾದ ವರದಿಯೊಂದಿಗೆ ಸಂಸ್ಥೆಯ ಮಹಾಸಭೆಯಲ್ಲಿ ಮಂಡಿಸಿ ಒಮ್ಮತದಿಂದ ಒಪ್ಪಿಗೆ ಪಡೆದುಕೊಳ್ಳುವುದು.
- ಸಂಸ್ಥೆಯು ಪಡೆಯಬೇಕಾದ ಸಾಲ ಮತ್ತು ಅನುದಾನದ ಬಗ್ಗೆ ಒಪ್ಪಿಗೆ ಕೊಡುವುದು.
- ಪ್ರತಿವರ್ಷ ಲೆಕ್ಕ ಪತ್ರ ಪರಿಶೋಧಿಸುವ ಬಗ್ಗೆ ಆಡಿಟ್ ರನ್ನು ನೆಮಿಸಿಸಲು ಅವರ ಸಂಬಳ ಗೊತ್ತು ಪಡಿಸುವುದು ವಾರ್ಷಿಕ ಸಾಮಾನ್ಯ ಸಭೆಯಲ್ಲಿ ನೂತನ ಆಡಳಿತ ಚುನಾಯಿಸಲ್ಪಡುವವರೆಗೆ ಮತ್ತು ಅಧಿಕಾರ ವಹಿಸಿಕೊಳ್ಳುವವರೆಗೆ ಹಿಂದಿನ ಆಡಳಿತ ಮಂಡಳಿಯೇ ಮಹಾಸಭೆಯ ಅಧಿಕಾರದಲ್ಲಿ ಇರುತ್ತದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ