ಭಾನುವಾರ, ನವೆಂಬರ್ 10, 2013

ಜಂಗಮ ಮಹಾಸಭಾ ನಿಭಂದನಾ ಪತ್ರಿಕೆ



ಅಖಿಲ ಭಾರತ 
ವೀರಶೈವ ಜಂಗಮ ಸಮಾಜ ಮಹಾಸಭಾ
  ನಿಭಂದನಾ ಪತ್ರಿಕೆ    
===================


1) ಸಂಸ್ಥೆಯ ಹೆಸರು : ಅಖಿಲ ಭಾರತ ವೀರಶೈವ ಜಂಗಮ ಸಮಾಜ ಮಹಾಸಭಾ

2)  ನೊಂದಾಯಿತ ಕಚೇರಿ ಸಂಪೂರ್ಣ ವಿಳಾಸ :

3)  ಸಂಸ್ಥೆಯ ವ್ಯಾಪ್ತಿ : ಭಾರತ ದೇಶವನ್ನು ಒಳಗೊಂಡಿರುತ್ತದೆ.

4) ಸದಸ್ಯತ್ವ ವರ್ಗೀಕರಣ ಹಾಗೂ ಶುಲ್ಕ ವಿವರ : ಈ ಮಹಾ ಸಭೆಯ ಸದಸ್ಯತ್ವ 5 ವಿಧದಲ್ಲಿ ವರ್ಗೀಕರಿಸಲಾಗಿದೆ 
1. ಸಾಮನ್ಯ ಸದಸ್ಯತ್ವ 2. ಅಜೀವ ಸದಸ್ಯತ್ವ 3. ದಾನಿಗಳು 4. ಪೋಷಕರು 5. ಮಹಾಪೋಷಕರು. ಸದಸ್ಯತ್ವ ಶುಲ್ಕವಿವರ : 1) ಸಾಮನ್ಯ : ವ್ಯೆಕ್ತಿಗೆ 51/-ರೂ. ಕುಟುಂಬಕ್ಕೆ 108/-ರೂ. 2)ಆಜೀವ : ವ್ಯೆಕ್ತಿಗೆ 251/-ರೂ. ಕುಟುಂಬಕ್ಕೆ 501/-ರೂ.
3) ದಾನಿಗಳು : ವ್ಯೆಕ್ತಿಗೆ 1008/-ರೂ. ಕುಟುಂಬಕ್ಕೆ 2501/-ರೂ.4) ಪೋಷಕರು : ವ್ಯೆಕ್ತಿಗೆ 5,555/-ರೂ. ಸಂಘ-ಸಂಸ್ಥೆಗಳಿಗೆ 11,111/- ರೂ.5) ಮಹಾಪೋಷಕರು : ವ್ಯೆಕ್ತಿಗೆ 11,111/- ರೂ. ಸಂಘ-ಸಂಸ್ಥೆಗಳಿಗೆ 21,111/- ರೂ. ಪೀಠಾಧೀಶರಿಗೆ 51,551/-ರೂ . ಪ್ರವೇಶ ಶುಲ್ಕ : 10/-ರೂ.

5) ಸಂಸ್ಥೆಯ ಸದಸ್ಯತ್ವ ಪಡೆಯುವ ವಿಧಾನ : 2) ಈ ಸಮಿತಿಯ ಸದಸ್ಯರಾಗಲು ಕನಿಷ್ಟ 18 ವರ್ಷ ವಯಸ್ಸು ಪೂರ್ಣವಾಗಿರಬೇಕು. ರಾಜ್ಯದ ಹೊರರಾಜ್ಯದ ದೇಶ ವಿದೇಶದ ವೀರಶೈವ ಜಂಗಮರು ಕೂಡಾ ಸದಸ್ಯರಾಗ ಬಹುದುರಾಜ್ಯದ ಹೊರಗಿನವರಿಗೆ ಕಾರ್ಯಕಾರಣಿ ಮಂಡಳಿಯಲ್ಲಿ ಪದಾದಿಕಾರಿ ಯಾಗಲು ಅವಕಾಶ ಇರುವುದಿಲ್ಲ ಸಲಹಾಸಮಿತಿಯಲ್ಲಿ ನೇಮಕ ಮಾಡಿಕೊಳ್ಳ ಬಹುದು. ಆದರೆ ಕರ್ನಾಟಕದ ಹೊರಗಿನವರುಶಾಖೆಗಳನ್ನು ಸ್ಥಾಪಿಸಿ ಕೊಳ್ಳಬಹುದು.2) ಸಮಿತಿಯ ರಚನಾತ್ಮಕ ಕಾರ್ಯಕ್ರಮಗಳಲ್ಲಿ ವಿಶ್ವಾಸ, ನಿಷ್ಠೆಯುಳ್ಳವರಾಗಿರಬೆಕು. 3) ಉತ್ತಮ ಚಾರಿತ್ರ್ಯೆ ಹೊಂದಿರುವ ಧರ್ಮದಲ್ಲಿ ನಿಷ್ಠೆಯುಳ್ಳವರು ಪರಂಪರೆಯನ್ನು ಗೌರವಿಸುವವರುಆಗಿರಬೇಕು. ವೀರಶೈವ ಧರ್ಮ ದವರಾಗಿರಬೇಕು.

6) ಸಂಸ್ಥೆಯ ಸದಸ್ಯತ್ವ ಪಡೆಯುವ ವಿಧಾನ : ಈ ಮಹಾಸಭೆಯ ಸದಸ್ಯರಾಗಬೇಕೆನ್ನುವವರು ನಿಗದಿಪಡಿಸಿದ ಅರ್ಜಿ ನಮೂನೆಯಲ್ಲಿ ವಿವರ (ಅಪೇಕ್ಷಾ ಪತ್ರ ) ತುಂಬಿ ಸದಸ್ಯತ್ವ ವಂತಿಕೆ ಹಣದೊಂದಿಗೆ ರೂಪಾಯಿ ೨೫-೦೦ ಪ್ರವೇಶ ಧನದೊಂದಿಗೆ ಕೊಡತಕ್ಕದ್ದು. ಕಾರ್ಯಕಾರಣಿ ಮಂಡಳಿಯು ಅಪೇಕ್ಷ ಪತ್ರವನ್ನು ಪರಿಶೀಲಿಸಿ ಒಪ್ಪಬಹುದು ಇಲ್ಲವೇ ತಿರಸ್ಕರಿಸಬಹುದು ತಿರಸ್ಕೃತ ಅರ್ಜಿದಾರರ ವಂತಿಕೆ ಹಣವನ್ನು ಹಿಂದುರಿಗಿಸಲಾಗುವುದು ಅದರೆ ಪ್ರವೇಶ ಶುಲ್ಕ ವಾಪಸು ಕೊಡುವುದಿಲ್ಲ.
7) ಸದಸ್ಯತ್ವ ರದ್ದಾಗುವಿಕೆ : ಈ ಕೆಳಕಂಡ ಕಾರಣಗಳಿಂದ ಸದಸ್ಯತ್ವ ರದ್ದಾಗುತ್ತದೆ.1) ಸದಸ್ಯರು ಮರಣಹೊಂದಿದರೆ. 
2) ಊರು ಬಿಟ್ಟು ಹೋದರೆ 3) ಬುದ್ದಿ ಬ್ರಮಣೆಯಾದರೆ 4) ರಾಜಿನಾಮೆ ಕೊಟ್ಟರೆ 5) ಹೆಚ್ಚಿನವಧಿಗೆ ವಂತಿಕೆ ಸಲ್ಲಿಸದಿದ್ದರೆ 
6) ಯಾವದೆವರ್ಗದ ಸದಸ್ಯತ್ವವು ಅವರ ದುರ್ನಡತೆಗೆ , ಅನೈತಿಕ ವರ್ತನೆ ಬಗ್ಗೆ ಇಲ್ಲವೇ ಮಹಾ ಸಭೆಯ ಹಿತಾಸಕ್ತಿಯ ವಿರುಧ್ಧವಾದ ನಡವಳಿಕೆಗಳ ಆರೋಪದ ಮೇರೆಗೆ ಮಹಾಸಭೆಯ ಸಾಮಾನ್ಯ ಸಭೆಯಲ್ಲಿ ಹಾಜರಿದ್ದ 2:3 ಭಾಗ ಸದಸ್ಯರು ಅನುಮತಿಕೊಟ್ಟಲ್ಲಿ ರದ್ದಗುವುದು. ಆದರೆ ಮಹಾಸಭೆಯು ಸಭೆ ಸೇರುವ ಮೊದಲು ಅಪಾದಿತ ಸದಸ್ಯರಿಗೆ ಅವರ ವಿರುದ್ಧ ಇರುವ ಅಪಾದನೆಗಳ ವಿವರ ಕೊಟ್ಟು ಲಿಖಿತ ವಿವಿರಣೆ ಸಲ್ಲಿಸಲು ಅವಕಾಶವಿರುತ್ತಕ್ಕದ್ದು ಮತ್ತು ಯೋಗ್ಯ ಕಾಲಾವಧಿ ಕೊಡತಕ್ಕದ್ದು. ಮಹಾಸಭೆಯ ಸಾಮಾನ್ಯ ಸಭೆಯಲ್ಲಿ ಆಪಾದನೆ ಪಟ್ಟಿ ಮತ್ತು ಆಪಾದಿತ ಸದಸ್ಯನ ವಿವರರಣೆ ಹಾಜರ ಪಡಿಸತಕ್ಕದ್ದು. ಇಲ್ಲವೆ ಸದಸ್ಯರಿಗೆ ತಮ್ಮ ಅಭಿಪ್ರಾಯವನ್ನು ಸಭೆಯಲ್ಲಿ ಹೇಳಿಕೊಳ್ಳುವ ಅವಕಾಶವಿರತಕ್ಕದ್ದು. ಆದರೆ ನಿರ್ಣಯ ಕೈಗೊಳ್ಳುವಾಗ ಅಂತ ಸದಸ್ಯನು ಸಭೆಯಿಂದ ಹೊರಗೆ ಇರತಕ್ಕದ್ದು. ಸಾಮಾನ್ಯ ಶೆಯ ನಿರ್ಣಯವೇ ಅಖೈರು ಆಗಿರುತ್ತದೆ.

8) ಆರ್ಥಿಕ ಸಂಪತ್ತು : ಮಹಾಸಭೆಯ ಕಾರ್ಯಕ್ಕೆ ಬೇಕಾಗುವ ಆರ್ಥಿಕ ಸಂಪತ್ತನ್ನು ಈ ರೀತಿಯಲ್ಲಿ ಸಂಗ್ರಹಿಸಬಹುದು 1) 
ಸದಸ್ಯರಿಂದ ಬಂದ ವಂತಿಕೆ 2) ಸಾರ್ವಜನಿಕರಿಂದ ಸಂಘ ಸಂಸ್ಥೆಗಳಿಂದ ಕಾಣಿಕೆ ದೇಣಿಗೆ ಅನುದಾನದಿಂದ 3)ಸಮಾಜದ ಅಭಿವೃದ್ಧಿಗಾಗಿ ರಾಜ್ಯ ಮತ್ತು ಕೇಂದ್ರ ಸರಕಾರಗಳಿಂದ, ಮಾನ್ಯಮಾಡಿದ ಬ್ಯಾಂಕುಗಳಿಂದ, ಹಣಕಾಸು ಸಂಸ್ಥೆಗಳಿಂದ ,ವಿದೇಶದಲ್ಲಿ ನೆಲಸಿದ ಭಾರತೀಯರಿಂದ, ಶಾಸಕ ಸಂಸದ ರಾಜ್ಯಸಭಾ ಸದಸ್ಯರ ಅನುದಾನದಿಂದ, 4) ಮಹಾಸಭೆಯ ನ್ಯಾಯ ಸಮ್ಮತವಾದ ವ್ಯವಹಾರದಿಂದ, ವೀದೆಶಿ ಸಂಘ ಸಂಸ್ಥೆಗಳಿಂದ ಹಣ ಸಹಾಯ ಪಡೆಯುವುದು, 5) ಆದಾಯಕರ ಕಾನೂನಿನಡಿಯಲ್ಲಿ 80ಜಿ ಅಡಿಯಲ್ಲಿ ಮಾನ್ಯತೆ ಪಡೆಯುವುದು, ಸಂಘ ಸಂಸ್ಥೆಗಳಿಗೆ ನಿಗದಿಪಡಿಸಿದ ನಿಯಮಗಳ ಅನ್ವಯ ಕಾರ್ಯ ನಿರ್ವಹಿಸುವುದು.

9) ಸಾಮಾನ್ಯ ಸಭೆ ಅಧಿಕಾರ ಮತ್ತು ಕಾರ್ಯವ್ಯಾಪ್ತಿ : ಈ ಮಹಾಸಭೆಗೆ ಒಂದು ಸಾಮಾನ್ಯ ಸಭೆ ಇರತಕ್ಕದ್ದು,
          ಸಾಮಾನ್ಯ  ಸಭೆಯಲ್ಲಿ ಪ್ರತಿಯೊಬ್ಬ ಸದಸ್ಯರು ಭಾಗವಹಿಸಲು ಹಕ್ಕು ಉಳ್ಳವರಾಗಿರುತ್ತಾರೆ. ಈ ಸಾಮಾನ್ಯ ಸಭೆಯು           ಮಾಹಾಸಬೆಯ ಎಲ್ಲ ಕಾರ್ಯಕ್ರಮಗಳ ನಿಯಂತ್ರಣಕ್ಕೆ ಪರಮೋಚ್ಚ ಅಧಿಕಾರ ಹೊಂದಿರುತ್ತದೆ. 
  1. ಸಮಿತಿಯ ಸದಸ್ಯರ ಪಟ್ಟಿಯಲ್ಲಿ ಸೇರ್ಪಡೆಯಾದಂತಹ ಸದಸ್ಯರು ಮಾತ್ರ ಮತದಾನದ ಹಕ್ಕು ಹೊಂದಿರುತ್ತಾರೆ. ಈ ನಿಯಮ ಪ್ರಥಮ ಸಾಮಾನ್ಯ ಸ್ಭೆಯಿಂದಲೇ ಅನ್ವಯವಾಗಿರುತ್ತದೆ. ಸಾಮಾನ್ಯ ಸಭೆಯು ಪ್ರತಿ ವಾರ್ಷಿಕ ವರ್ಷಕ್ಕೆ ಒಂದು ಸಲವಾದರೂ ತಪ್ಪದೇ ಕರ್ಯತಕ್ಕದ್ದು ಅದು ಸಂಸ್ಥೆಯ ವಾರ್ಷಿಕ ವರ್ಷ ಮುಗಿದ ಆರು ತಿಂಗಳ ಒಳಗಾಗಿ ಇರತಕ್ಕದ್ದು.
  2. ಮೂರು ವರ್ಷಕ್ಕೊಮ್ಮೆ ಕಾರ್ಯಕಾರಿ ಮಂಡಳಿಯ ಸದಸ್ಯರನ್ನು ಚುನಾಯಿಸುವ ಮೂಲಕ ಸಾಮಾನ್ಯ ಸಭೆ ನಿರ್ಧರಿಸಿದಂತೆ ಕಾರ್ಯಕಾರಿ ಮಂಡಳಿ ಸದಸ್ಯರಿರತಕ್ಕದ್ದು. 
  3.  ಹಿಂದಿನ ವರ್ಷದ ಆರ್ಥಿಕ ಸ್ಥಿತಿ ನಿರ್ಮಿಸುವುದು ಆಡಿಟ್ ಆದ ಲೆಕ್ಕ ಪತ್ರಗಳನ್ನು ಪರಿಸಿಲಿಸಿ ಒಪ್ಪಿಗೆ ಕೊಡುವುದು. 
  4.  ಚಾಲ್ತಿ ವರ್ಷದ ಅಂದಾಜು ಜಮ ಖರ್ಚಿನ ಪಟ್ಟಿ ಹಾಗೂ ಯೋಜನೆಗಳಿಗೆ ವಿವರಗಳನ್ನು ಪರಿಶೀಲಿಸಿ ಒಪ್ಪಿಗೆ ಕೊಡುವುದು.
  5. ಸಂಸ್ಥೆಯ  ಲೆಕ್ಕ ಪತ್ರಗಳನ್ನು ರಜಿಸ್ಟರ್ಡ ಚಾರ್ಟೆಡ್ ಅಕೌಂಟೆಂಟ ರವರ ಕಡೆಯಿಂದ ಪ್ರತಿ ವರ್ಷವೂ ತಪಾಸಣೆ ಮಾಡಿಸಬೇಕು ಆಡಿಟ್ ಪತ್ರಿಕೆ  ಮತ್ತು ಆಡಿಟ್ ರವರು ಆ ಬಗ್ಗೆ ಸಲ್ಲಿಸಿದ ವಿವರವಾದ ವರದಿಯೊಂದಿಗೆ ಸಂಸ್ಥೆಯ ಮಹಾಸಭೆಯಲ್ಲಿ ಮಂಡಿಸಿ ಒಮ್ಮತದಿಂದ ಒಪ್ಪಿಗೆ ಪಡೆದುಕೊಳ್ಳುವುದು. 
  6. ಸಂಸ್ಥೆಯು ಪಡೆಯಬೇಕಾದ ಸಾಲ ಮತ್ತು ಅನುದಾನದ ಬಗ್ಗೆ ಒಪ್ಪಿಗೆ ಕೊಡುವುದು. 
  7. ಪ್ರತಿವರ್ಷ ಲೆಕ್ಕ ಪತ್ರ ಪರಿಶೋಧಿಸುವ ಬಗ್ಗೆ ಆಡಿಟ್ ರನ್ನು ನೆಮಿಸಿಸಲು ಅವರ ಸಂಬಳ ಗೊತ್ತು ಪಡಿಸುವುದು ವಾರ್ಷಿಕ ಸಾಮಾನ್ಯ ಸಭೆಯಲ್ಲಿ ನೂತನ ಆಡಳಿತ ಚುನಾಯಿಸಲ್ಪಡುವವರೆಗೆ ಮತ್ತು ಅಧಿಕಾರ ವಹಿಸಿಕೊಳ್ಳುವವರೆಗೆ ಹಿಂದಿನ ಆಡಳಿತ ಮಂಡಳಿಯೇ ಮಹಾಸಭೆಯ ಅಧಿಕಾರದಲ್ಲಿ ಇರುತ್ತದೆ.   
  

ಶನಿವಾರ, ನವೆಂಬರ್ 9, 2013

ಜಂಗಮ ಆರಾಧನೆಯೇ ವೀರಶೈವ ಧರ್ಮದ ಜೀವಾಳ.

ವಿಶ್ವಧರ್ಮವಾದ ವೀರಶೈವ ಧರ್ಮದ ಪ್ರಚಾರಕ ಪ್ರಸಾರಕ ಮತ್ತು ರಕ್ಷಕ ಪ್ರಥಮ ವ್ಯೆಕ್ತಿ ಮತ್ತು ವರ್ಗವೆಂದರೆ ಜಂಗಮ ಮತ್ತು ಜಂಗಮ ಸಮಾಜ. ಕೆಲವು ಅಜ್ಞಾನಿಗಳು ಈ ಜಂಗಮ ಸಮುದಾಯಕ್ಕೆ ಜಾತಿಯ ಪಟ್ಟ ಕಟ್ಟುತ್ತಿದ್ದಾರೆ. ಜಂಗಮ ಒಂದು ಜಾತಿಯಲ್ಲ ಅದು ಒಂದು ತತ್ವ. ಧರ್ಮದ ರಕ್ಷಣೆಗಾಗಿ ವೀರಶೈವ ಧರ್ಮದ ಸಂವಿಧಾನದಂತೆ ಧರ್ಮಾದಿಕಾರಿಗಳಿಂದ ಧರ್ಮ ರಕ್ಷಣೆಯ ಧೀಕ್ಷೆ ಪಡೆದು ಧರ್ಮದ ಪ್ರಾಥಮಿಕ ಆಚರಣೆಯ ಸಂಸ್ಕಾರ ನೀಡಲು ಸಂಪೂರ್ಣವಾಗಿ ಸಮರ್ಪಿಸಿಕೊಂಡ ತ್ಯಾಗ ಜೀವಿ ವೀರ ವಿರಾಗಿ ಈ ಜಂಗಮರು. ಒಂದು ಅರ್ಥದಲ್ಲಿ ಪ್ರಾಥಮಿಕ ಶಿಕ್ಷಕನಿದ್ದ ಹಾಗೆ. ಒಬ್ಬ ವ್ಯೆಕ್ತಿಯ ಶೈಕ್ಷಣಿಕ ಸಾಧನೆಯಲ್ಲಿ ಪ್ರಾಥಮಿಕ ಶಾಲೆಯ ಶಿಕ್ಷಕನ ಪಾತ್ರ ಎಷ್ಟು ಮುಖ್ಯವೋ ಧಾರ್ಮಿಕ ಕ್ಷೇತ್ರದಲ್ಲಿ ಈ ಜಂಗಮನ ಪಾತ್ರವೂ ಅಷ್ಟೇ ಮುಖ್ಯವಾದದ್ದು. ಒಬ್ಬ ವ್ಯೆಕ್ತಿಯ ಜೀವನದಲ್ಲಿ ಶಿಕ್ಷಕನ ಪಾತ್ರದ ಮಹತ್ವ ನೆನಪಿಸಿಕೊಳ್ಳಲು, ಸ್ವತಂತ್ರ ಭಾರತದ ಪ್ರಥಮ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣರು ತಮ್ಮ ಜನ್ಮದಿನದ ಬದಲಿಗೆ ಶಿಕ್ಷಕರ ದಿನಾಚರಣೆಯನ್ನು ಆರಂಭಿಸಿ ಶಿಕ್ಷನಿಗೆ ಗೌರವ ಸಲ್ಲುವಂತೆ ಮಾಡಿ ಶಿಕ್ಷಕನ ಮಹತ್ವ ಸಾರಿದರು. ಅದೇ ರೀತಿ ಭಕ್ತಿ ಭಂಡಾರಿ ಬಸವಣ್ಣನವರು ನಿತ್ಯ ಜಂಗಮ ಆರಾಧಕರಾಗಿ ತಮ್ಮನ್ನು ಅನುಸರಿಸುವವರಿಗೆ ಜಂಗಮ ಆರಾಧನೆ ಕಡ್ಡಾಯವಾಗಿಸಿದ್ದರು ಮಾತ್ರವಲ್ಲದೆ ತಮ್ಮ ಜೀವನದ ಉದ್ದಕ್ಕೂ ಜಂಗಮ ಆರಾಧನೆ ನಡೆಸಿಕೊಂಡು ಬಂದರು. ಜಂಗಮ ಆರಾಧನೆಯೇ ವೀರಶೈವ ಧರ್ಮದ ಜೀವಾಳ. ಜಂಗಮ ಆರಾಧನೆ ಇಲ್ಲವಾದರೆ ಧರ್ಮ ಉಳಿಯಲು ಸಾಧ್ಯೆವೇಯಿಲ್ಲ ಆದರೆ ಇಂದು ನಿತ್ಯ ಜಂಗಮ ತೃಪ್ತಿ  ಬದಲು ನಿತ್ಯ ಜಂಗಮ ನಿಂದೆಯಾಗುತ್ತಿದೆ ನಿತ್ಯತೃಪ್ತಿ ಮಾಡುತ್ತಿದ್ದ ಬಸವಣ್ಣನವರನ್ನು ಭಂಡವಾಳವಾಗಿಸಿ ಕೊಂಡ ಕೆಲವು ಬಸವ ತತ್ವ ವ್ಯಾಪಾರಿಗಳು ಜಂಗಮರನ್ನು ವಿರೋಧಿಸುತಿದ್ದಾರೆ. ಅಂಥಹ ಕೆಲವರಿಗೆ ನಾವು ಕೇಳುವುದು ಇಷ್ಟೇ ಮೊದಲು ನೀವು ಲಿಂಗಾಯತರು ಎಂಬುದನ್ನು ಮೊದಲು ಶಿದ್ಧ ಪಡಿಸಿ ಸ್ವತಂತ್ರ ಧರ್ಮದ ಹಕ್ಕು ಸ್ಥಾಪಿಸಲು ಮುಂದಾಗಿ .  ಬಸವಣ್ಣನವರ ವಚನ ಚನ್ನಾಗಿ ಪ್ರವಚನ ಮಾಡುವದಕ್ಕೆ ಬಂದಮಾತ್ರಕ್ಕೆ ಅಥವಾ ನಿಮ್ಮ ಮರುಳು ಮಾತಿಗೆ ಮರುಳಾಗಿ ಹಣದಾಸೆಗಾಗಿ ನಿಮ್ಮನ್ನು ಹಿಂಬಾಲಿಸುವವರನ್ನು ಕಟ್ಟಿಕೊಂಡು ಮಾಧ್ಯಮಗಳ ಮುಂದೆ ಮಾತಾಡಿದರೆ ಸಾಕಾ?  ಸಮಾಜ ಬಾಂಧವರೇ ದಯಮಾಡಿ ಗಮನಿಸಿ ನಮ್ಮ ಮನೆಯೊಳಗೇ ಆಸ್ತಿಯಲ್ಲಿ ಪಾಲು ಬೇಡಲು ನಮಗೆ ಯಾವುದಾದರು ಹಕ್ಕು ಇರಬೇಕಲ್ಲವೇ ? ಯಾವುದಾದರು ಸಂಬಂದ ಹೊದಿಲ್ಲದವರಿಗೆ ಪಾಲು ಕೊಡಲು ಸಾಧ್ಯವೇ ? ದುಡ್ಡು ಇದೆಯಂದು ಎಲ್ಲಿ ಬೇಕಲ್ಲಿ ಹೊಲ ಖರಿದಿ ಮಾಡ ಬೇಕಾದರೆ ಆವ್ಯೆಕ್ತಿ ಹೆಸರಲ್ಲಿ ಎಲ್ಲಿಯಾದರೂ ಭೂಮಿ ಇರಲೇ ಬೇಕು ಅವನ ವಂಶಸ್ಥರಾದು ಕೃಷಿಕರಾಗಿರಬೇಕು ಎಂಬ ಕಾನೂನು ಇದೆ ಇಲ್ಲದಿದ್ದರೆ ಎಷ್ಟೇ ದುಡ್ಡುಕೊಟ್ಟರು ಭೂಮಿ ಹಕ್ಕುದಾರನಾಗುವುದಿಲ್ಲ ಹಾಗೆಯೇ ನಮ್ಮಲ್ಲಿ ಗುರು ವಿರಕ್ತರು ಎಂಬ ದಾಯದಿಗಲಿದ್ದೇವೆ ಇಲ್ಲಿ ಹಕ್ಕು ಮಂಡನೆ ಆಸ್ತಿ ಪಾಲು ಇವರಲ್ಲೇ ಯಾಗಬೇಕು ಮಾತೆ ಮಾದೇವಿ ಮತ್ತು ಅವರ ಹಿಂಬಾಲಕರಿಗೆ ಲಿಂಗಾಯತ ಸ್ವತಂತ್ರ ಹಕ್ಕು ಮಂಡನೆಗೆ ಅಧಿಕಾರವೇ ಇಲ್ಲ.  ಮಾತೆ ಮಾದೇವಿ ಮತ್ತವರ ಹಿಬಾಲಕರು ಲಿಂಗಾಯತರೇ ಅಲ್ಲ ಅದಕ್ಕಾಗಿ ಮಾದ್ಯಮಗಳು ಅವರ ಪುಡಿಕಾಸಿಗಾಗಿ ಪ್ರಚಾರ ಕೊಡಬಾರದು . ವಿರಕ್ತರಲ್ಲೇ ಕೆಲವು ಪ್ರಗತಿಪರ ಸ್ವಾಮೀಜಿಗಳು ಬೇಕಾದರೆ ಸ್ವತಂತ್ರ ಧರ್ಮದ ಹಕ್ಕು ಮಂಡಿಸಲಿ. ಈ ವಿರಕ್ತ ಮಠದ ಪೂಜ್ಯರಿಂದ ದೀಕ್ಷೆ ಪಡೆದು ಆಸ್ವತಂತ್ರ ಸ್ವೀಕರಿಸಲಿ ಆಮೇಲೆ ಬೇಕಾದರೆ ಹಕ್ಕು ,ಮಂಡನೆ ಮಾಡಲಿ. ಮಾತೆ ಮಾದೆವಿಯವರಿಗೆ ನಾವು ಕೇಳುವುದೆಂದರೆ ನೀವು ಯಾರು ನಿಮ್ಮ ಸ್ವತಂತ್ರ ಧರ್ಮದಲ್ಲಿ ನಿಮ್ಮ ಸ್ಥಾನೆವೇನು ಬಸವಣ್ಣ ನವರು ನಿಮ್ಮಂತೆ ಯಾವದೇ ಸಂಧರ್ಭದಲ್ಲಿ ತಮ್ಮನ್ನು ತಾವು ಗುರು ಜಗದ್ಗುರು ಎಂದು ಕೊಂಡಿರಲಿಲ್ಲ ಎನ್ನುವದು ನಿಮಗೆ ತಿಳಿದಿಲ್ಲವೇ ಅಲ್ಲಮ ಪ್ರಭುವನ್ನು ಜಗದ್ಗುರುವಾಗಿ ಮಾಡಿರಲಿಲ್ಲವೇ ಹಾಗೆ ನೀವು ಯಾರಿಗಾದರು ಜಗದ್ಗುರುವಾಗಿ ಯಾಕೆ ಮಾಡಲಿಲ್ಲ ? ಈಗ ನಿಮ್ಮ ಪ್ರವಚನದ ಚಾರ್ಮ ಕಡಿಮೆಯಾಗಿದೆ ನಿಮಗಿಂತ ಚನ್ನಾಗಿ ಯಾಮರಿಸುವ ಕಲೆ ಬಲ್ಲವರು ಬಹಳ ಜನರು ಈಗ ಹೆಚ್ಚಾಗಿದ್ದರೆ ಅದಕ್ಕಾಗಿ ನೀವು ನಿಮ್ಮ ಇರುವಿಕೆ ಸಾಬೀತು ಪಡಿಸಿಕೊಳ್ಳಲು ಈ ನಾಟಕ ಸುರು ಹಚ್ಚಿಕೊಂಡಿದ್ದಿರಿ ಅಂತ ನಿಮ್ಮವರೇ ಆಡಿ ಕೊಳ್ಳುತ್ತಿದ್ದರಲ್ಲ ಅವರಿಗೆ ನಿಮ್ಮ ಉತ್ತರವೇನು ?

ಗುರುವಾರ, ನವೆಂಬರ್ 7, 2013

ಅಪೇಕ್ಷಾ ಪತ್ರ

ಅಖಿಲ ಭಾರತ 
ವೀರಶೈವ ಜಂಗಮ ಸಮಾಜ ಮಹಾಸಭಾ
======================================================================
ಕೇಂದ್ರ ಕಚೇರಿ H.NO.13, ನಾರಾಯಣಪ್ಪ ಕಂಪೌಂಡ ಕೊಡಿಗೆ ಹಳ್ಳಿ ತಿಡ್ಲು ಮೆನ್ ರೋಡ ಸಹಕಾರಿ ನಗರ ಬೆಂಗಳೂರು-92 ಆಡಳಿತ ಕಚೇರಿ 'ಶ್ರೀ ಕೆರಿ ಬಸವ ನಿಲಯ'ಪಂಚಾಕ್ಷರಿ ನಗರ ೪ನೆಯ ಅಡ್ಡರಸ್ತೆ ಗದಗ -1. ದೂರವಾಣಿ:08372-220432.
======================================================================

*ಸದಸ್ಯತ್ವ ಅಪೇಕ್ಷಾ ಪತ್ರ ***
---------------------------------------------------------------------- 
ಪೂರ್ಣ ಹೆಸರು :
------------------------------------------------------------------------------------------------------------
ತಂದೆಯ ಹೆಸರು : 
------------------------------------------------------------------------------------------------------------
ತಾಯಿಯ ಹೆಸರು :
------------------------------------------------------------------------------------------------------------
ಅಡ್ಡ ಹೆಸರು :
------------------------------------------------------------------------------------------------------------
ಜನ್ಮ ಸ್ಥಳ : 
------------------------------------------------------------------------------------------------------------
ಜನ್ಮ ದಿನಾಂಕ :
------------------------------------------------------------------------------------------------------------
ಉದ್ಯೋಗ : 
------------------------------------------------------------------------------------------------------------
ಮೊಬೈಲ್ ನಂ : 
------------------------------------------------------------------------------------------------------------
e-mail : 
----------------------------------------------------------------------------------------------------------------------------------
ಅಂಚೆ ವಿಳಾಸ :




------------------------------------------------------------------------------------------------------------
ಸ್ಥಳ        : 
ದಿನಾಂಕ  :                                                                                                ಅರ್ಜಿದಾರರ ಸಹಿ/-
=====================================================================
ಸದಸ್ಯತ್ವ ಶುಲ್ಕವಿವರ :  ಸಾಮಾನ್ಯ: 250/- ರೂಗಳು. ಆಜೀವ: 500/- ರೂಗಳು. ದಾನಿಗಳು: 1000/- ರೂಗಳು.  ಪೋಷಕರು: 2500/- ರೂಗಳು. ಮಹಾಪೋಷಕರು: 5000/- ರೂಗಳು. + ಪ್ರವೇಶ ಶುಲ್ಕ 25/-ರೂಗಳು
----------------------------------------------------------------------------------------------------------
ಶುಲ್ಕ ಸಂದಾಯ ಮಾಡಬೇಕಾದ ವಿಳಾಸ : Channaveerayya K. Hiremath AXIS BANK GADAG
A/C NO.413010100002738 IFS Code UTIB0000413.ಶುಲ್ಕವನ್ನು M.O.ಅಥವಾ D.D. ಮೂಲಕವೂ ಸಂದಾಯ ಮಾಡಬಹುದು