ಗುರುವಾರ, ಅಕ್ಟೋಬರ್ 31, 2013

ಈ ವೀರಶೈವ ಧರ್ಮ ಒಡೆಯಲು ಬಿಡುವುದಿಲ್ಲ.

ಆತ್ಮೀಯರೇ ..... 
ಜಂಗಮ ಸಮುದಾಯ ಜಾತಿಯೂ ಅಲ್ಲ ಒಳ ಪಂಗಡವೂ ಅಲ್ಲ ಈ ಜಂಗಮರು ವೀರಶೈವ ಧರ್ಮದ ಪ್ರಥಮ ಪ್ರಜೆಗಳು. ಜಂಗಮನಿಲ್ಲದ ವೀರಶೈವ ಧರ್ಮ ನೆನಸಿಕೊಳ್ಳಲು ಸಾಧ್ಯವೇ ಇಲ್ಲ.ಧರ್ಮದ ಪದ್ಧತಿಯಂತೆ ಜಂಗಮ ದೀಕ್ಷೆಯಾಗಿ ಭಕ್ತ ವರ್ಗಕ್ಕೆ ಲಿಂಗ ಧಾರಣೆ ಮಾಡಲು  ವೀರಶೈವ ಧರ್ಮದ ಜಗದ್ಗುರುಗಳವರಿಂದ ಧರ್ಮದ  ಸಂವಿಧಾನ ಬದ್ಧ ಅಧಿಕಾರವನ್ನು ಪಡೆದುಕೊಂಡು ಧರ್ಮದ ಆಚರಣೆಗಳನ್ನು ಉಳಿಸಿಕೊಂಡು ಬಂದ ಧಮಾಧಿಕಾರಿ ಈ ಜಂಗಮ. ಕರ್ನಾಟಕದಲ್ಲಿ  ಬಹುಸಂಖ್ಯಾತರು ಭಾರತದಲ್ಲಿ ಅಲ್ಪ ಸಂಖ್ಯಾತರಾಗಿರುವ ಈ ವೀರಶೈವ ರೆಲ್ಲರಿಗೂ ಹುಟ್ಟಿದ ದಿನವೇ ಅವರ ಮನೆಗೆ ಹೋಗಿ ಲಿಂಗ ದಾರಣೆ ಮಾಡಿ ಲಿಂಗವಂತನನ್ನಾಗಿ ಮಾಡಿ ವೀರಶೈವ ದರ್ಮವನ್ನು ರಕ್ಷಿಸಿಕೊಂಡು ಬಂದ ಧರ್ಮ ರಕ್ಷಕ ಈ ಜಂಗಮ ನೇ ಹೊರತು ಬೇರೆ ಯಾರು ಅಲ್ಲ ನಾವು ಲಿಂಗಾಯತರು ನಾವು ವೀರಶೈವರು ಎಂದು ಹೊಡೆದಾಡುತ್ತಿರುವ ಅಥವಾ ಪ್ರತ್ಯೇಕ ಅಸ್ತಿತ್ವಕ್ಕಾಗಿ ಪರಿತಪಿಸುತ್ತಿರುವವರು ಈ ಜಂಗಮರನ್ನು ಸ್ಮರಿಸಿಕೊಳ್ಳಲೇಬೆಕು ಯಾಕಂದರೆ ಇವರೆಲ್ಲರಿಗೂ ಲಿಂಗ ಕಟ್ಟಿದವರೇ ನಾವು. ತಮ್ಮ ತಮ್ಮ ಹಿಂಬಾಲಕರಿಗೆ ಲಿಂಗ ಧಾರಣೆ ಮಾಡದ ಇವರು ಅವರ ನಾಯಕರಾದರು ಹೇಗಾಗಲು ಸಹಾಧ್ಯ. ಪ್ರತ್ಯೇಕವಾದಿಗಳು ನೆನಪಿಟ್ಟು ಕೊಳ್ಳಲಿ ನಿಮ್ಮ ಹಿಂಬಾಲಕರಂದು ನಿಮ್ಮ ಮಾತಿಗೆ ಮರುಳಾಗಿ ನಿಮ್ಮ ಹಿಂದೆ ಬಂದಿದ್ದಾರಲ್ಲ ಅವರೆಲ್ಲರಿಗೂ ಲಿಂಗ ಕಟ್ಟಿದವರು ನಾವು.ಹಾಗೆ ವಿಚಾರ ಮಾಡಿದರೆ ನಿಮಗೂ ಕೂಡಾ ಲಿಂಗ ಕಟ್ಟಿದವರು ನಾವೇ.. .ಸರಿಯಾದ  ತಿಳುವಳಿಕೆ ನೀಡದ ಕಾರಣ ನಿಮ್ಮನ್ನು ಹಿಂಬಾಲಿಸುತಿದ್ದರೆ ನಮಗೂ ತಲೆ ಕೆಟ್ಟಿದೆ ನಾವು ಇನ್ನು ಸುಮ್ಮನಿರಲು ಸಾಧ್ಯವಿಲ್ಲ ಮನೆ ಮನೆಗೆ ಹೋಗುತ್ತೇವೆ ತಿಳುವಳಿಕೆ ನೀಡುತ್ತೆವೆ ಜನ ಜಾಗೃತಿ ಮೂಡಿಸುತ್ತೆವೆ ಈ ವೀರಶೈವ ಧರ್ಮ ಒಡೆಯಲು ಬಿಡುವುದಿಲ್ಲ. ನಿಮ್ಮದೆನಿದ್ದರು ಮಾದ್ಯಮಗಳ ಮುಂದೆ ಮಾತ್ರ ಹಳ್ಳಿಗೆ ಬಂದರೆ ನಿಮಗೆ ಸರಿಯಾಗಿ ಬುದ್ದಿ ಹೇಳುತ್ತೇವೆ ಇದು ನಿಮಗೆ ಗೊತ್ತಿದ್ದೇ ನೀವು ಹಳ್ಳಿಗಳಿಗೆ ಕಾಲು ಇಟ್ಟಿಲ್ಲ ಇಡುವುದು ಇಲ್ಲ ಇಡಲು ನಾವು ಬಿಡುವುದು ಇಲ್ಲ.ನೀವೆಲ್ಲ ನಮ್ಮ ಮುಂದಿನ ಕೂಸುಗಳು ನಾವು ಸಾವಿರ ಸಾವಿರ ವರ್ಷ ಗಳಿಂದಲೂ ಬಂದವರು ನಮಗೆ ನೀವು ತೃಣ ಸಮಾನರು. ಸಮಸ್ತ ವೀರಶೈವ ಸಮಾಜ ಬಾಂಧವರೆ ಗುರು ವಿರಕ್ತರು ನಮ್ಮ ಧರ್ಮದ ಎರಡು ಕಣ್ಣುಗಳು ಅವುಗಳನ್ನು ಚನ್ನಾಗಿ ನೋಡಿಕೊಳ್ಳುವುದು ನಮ್ಮ ಧರ್ಮ ಈ ಗುರು ವಿರಕ್ತರ ಸಣ್ಣ ಪುಟ್ಟ ಭಿನ್ನಾಭಿಪ್ರಾಯ ಅವರೇ ಬಗೆ ಹರಿಸಿ ಕೊಳ್ಳುತ್ತಾರೆ ಅವರಿಗೆ ಬಿಟ್ಟು ಬಿಡಿ ಬಗೆ ಹರಿಸಲು ತಿಳಿ ಹೇಳಿ ಬೀದಿಗಿಳಿದು ಹೋರಾಡಲು ಬಿಡಬೇಡಿ. ಗುರು ವಿರಕ್ತ ಪರಂಪರೆ ಹೊರತು ಪಡಿಸಿ ಇನ್ನೊಂದು ಯಾವದೇ ಪಂಗಡ ಹುಟ್ಟುಹಾಕಬೇಡಿ ಆಸೆ ಆಮಿಷಕ್ಕೆ ಬಲಿಯಾಗಿ ಕೊಲೆ ಬಸವರಾಗಬೇಡಿ ಬಸವಣ್ಣ ಬರಿ ನಮ್ಮ ಆಸ್ತಿ ಎಂದು ಕೆಲವೇ ಕೆಲವರು ಬಸವಣ್ಣ ನವರನ್ನು ಬಂಡವಾಳವಗಿಸಿಕೊಳ್ಳಲು ಬಿಡಬೇಡಿ ಮುಂದಿನ ನಮ್ಮ ಪೀಳಿಗೆ ನಮ್ಮನ್ನು ಶಪಿಸುವಂತಾಗದಂತೆ ಎಚ್ಚರಿಕೆವಹಿಸಿ ಇದು ನಮ್ಮ ವಿನಂತಿ ಅಲ್ಲ ಆಜ್ಞೆ.ವೀರಶೈವನಮ್ಮ ಹೊಣೆ.

ಭಾನುವಾರ, ಅಕ್ಟೋಬರ್ 27, 2013

ಸನಾತನ ಧರ್ಮಗಳಲ್ಲಿ ವೀರಶೈವ ಧರ್ಮವು ಒಂದು

ಭಾರತೀಯ ಸನಾತನ ಧರ್ಮಗಳಲ್ಲಿ ವೀರಶೈವಧರ್ಮವು ಒಂದು ಪ್ರಮುಖವಾದುದಾಗಿದೆ. ಈ ಧರ್ಮಕ್ಕೆ ಯುಗಯುಗಗಳ ಪರಂಪರೆಯಿದೆ. ಶಿವನ ಆದೇಶದ ಮೇರೆಗೆ ಶ್ರೀ ಜಗದ್ಗುರು ಪಂಚಾಚಾರ್ಯರು ಪ್ರತಿಯೊಂದು ಯುಗದಲ್ಲಿ ಲಿಂಗೋದ್ಭವರಾಗಿ ಅವತರಿಸಿ ಈ ಧರ್ಮವನ್ನು ಪ್ರತಿಶ್ಃಟಾಪಿಸಿದ್ದಾರೆ. ಸಮಸ್ತ ಮನುಕುಲದ ಉದ್ಧಾರಕ್ಕಾಗಿ ಈ ಧರ್ಮದ ಪಂಚಪೀಠಗಳು ರಂಭಾಪುರೀ(ಕನರ್ಾಟಕ), ಉಜ್ಜಯಿನಿ(ಮಧ್ಯ ಪ್ರದೇಶ ಮತ್ತು ಕನರ್ಾಟಕ), ಕೇದಾರ(ಉತ್ತರಾಂಚಲ), ಶ್ರೀಶೈಲ(ಆಂದ್ರ ಪ್ರದೇಶ) ಮತ್ತು ಕಾಶೀ(ಉತ್ತರ ಪ್ರದೇಶ) ಕ್ಷೇತ್ರಗಳಲ್ಲಿ ಸನಾತನ ಕಾಲದಿಂದಲೂ ಲೋಕಕಲ್ಯಾಣ ಕಾರ್ಯಗಳನ್ನು ಮಾಡುತ್ತಾ ಬಂದಿವೆ. ಇವು ಈ ವೀರಶೈವಧರ್ಮದ ರಾಷ್ಟ್ರೀಯ ಮಹಪೀಠಗಳಾಗಿವೆ.
ರಂಭಾಪುರೀ ಪೀಠದ ಶ್ರೀ ಜಗದ್ಗುರು ರೇಣುಕಾಚಾರ್ಯರು ಅಗಸ್ತ್ಯ ಮಹಷರ್ಿಗೆ ಪಡಿವಿಡಿ ಸೂತ್ರವನ್ನು, ಉಜ್ಜಿಯಿನಿಪೀಠದ ಶ್ರೀ ಜಗದ್ಗುರು ದಾರುಕಾಚಾರ್ಯರು ದದೀಚಿ ಮಹಷರ್ಿಗೆ ವೃಷ್ಟಿ ಸೂತ್ರವನ್ನು, ಕೇದಾರಪೀಠದ ಶ್ರೀ ಜಗದ್ಗುರು ಘಂಟಾಕಣರ್ಾಚಾರ್ಯರು ವ್ಯಾಸ ಮಹಷರ್ಿಗೆ, ಶ್ರೀಶೈಲಪೀಠದ ಶ್ರೀ ಜಗದ್ಗುರು ಧೇನುಕಣರ್ಾಚಾರ್ಯರು ಸಾನಂದಮಹಷರ್ಿಗೆ ಮುಕ್ತಾಗುಚ್ಚ ಸೂತ್ರವನ್ನು ಮತ್ತು ಕಾಶೀ ಪೀಠದ ಶ್ರೀ ಜಗದ್ಗುರು ವಿಶ್ವಕಣರ್ಾಚಾರ್ಯರು ದೂವರ್ಾಸ ಮಹಷರ್ಿಗೆ ಪಂಚವರ್ಣ ಸೂತ್ರವನ್ನು ಉಪದೇಶ ಮಾಡಿದ್ದಾರೆ. ಈ ಪಂಚಸೂತ್ರಗಳೇ ವೀರಶೈವಧರ್ಮದ ತತ್ತ್ವಸಿದ್ಧಾಂತವನ್ನು ಪ್ರತಿಪಾದಿಸುವ ಆದಿಸೂತ್ರಗಳಾಗಿವೆ.
ವೀರಶೈವಧರ್ಮದ ತತ್ತ್ವಸಿದ್ಧಾಂತವು ಶಿವಾದ್ವೈತ, ವಿಶೇಷಾದ್ವೈತ ಮತ್ತು ಶಕ್ತಿವಿಶಿಷ್ಟಾದ್ವೈತ ಎಂಬ ಹೆಸರಿನಿಂದ ಕರೆಯಲ್ಪಡುತ್ತದೆ. ಈ ಸಿದ್ಧಾಂತದ ಮೂಲ ಬೇರುಗಳು ವೇದ, ಉಪನಿಷತ್ ಮತ್ತು ಕಾಮಿಕಾದಿ ವಾತುಲಾಂತಗಳಾದ 28 ಶಿವಾಗಮಗಳಲ್ಲಿ ಕಂಡು ಬರುತ್ತವೆ. ಈ ವೇದಾಗಮಗಳನ್ನು ಆಮೂಲಾಗ್ರವಾಗಿ ಅಧ್ಯೌ=ಯನ ಮಾಡಿದ ಶಿವಯೋಗಿಗಳಲ್ಲಿ ಚಕ್ರವತರ್ಿಯೆಂದು ಕರೆಯಿಸಿಕೊಳ್ಳಲ್ಪಟ್ಟ ಶ್ರೀ ಶಿವಯೋಗಿ ಶಿವಾಚಾರ್ಯರು ಮೇಲಿನ ವೇದಾಗಮಗಳಲ್ಲಿ ಅಡಗಿರುವ ವೀರಶೈವ ಸಿದ್ಧಾಂತವನ್ನು ರೇಣುಕಾಗಸ್ತ್ಯ ಸಂವಾದರೂಪದಲ್ಲಿ ಬರೆದಿಟ್ಟಿದ್ದಾರೆ. ಅದುವೇ ಶ್ರೀ ಸಿದ್ಧಾಂತಶಿಖಾಮಣಿ.  ಈ ಗ್ರಂಥದಲ್ಲಿ ವೀರಶೈವಧರ್ಮದ ಪ್ರಮುಖ ತತ್ತ್ವಗಳಾದ ಅಷ್ಟಾವರಣ, ಪಂಚಾಚಾರ ಮತ್ತು ಷಟ್ಸ್ಥಲ ಸಿದ್ಧಾಂತವನ್ನು ನೂರೊಂದು ಸ್ಥಲಗಳ ರೂಪದಲ್ಲಿ ವಿಸ್ತಾರಗೊಳಿಸಿದ ಪ್ರಥಮ ಗ್ರಂಥವೇ ಶ್ರೀ ಸಿದ್ಧಾಂತಶಿಖಾಮಣಿ.
ಶ್ರೀ ಜಗದ್ಗುರು ರೇಣುಕ ಭಗವತ್ಪಾದರ ಪ್ರಸಾದ ವಾಣಿಯಿಂದ ಇದು ಹೊರಹೊಮ್ಮಿದ ಕಾರಣ ಇದೊಂದು ಪ್ರಾಸಾದಿಕಗ್ರಂಥವು. ಈ ಗ್ರಂಥವನ್ನು ಪ್ರತಿನಿತ್ಯ ಯಾರು ಪಾರಯಣ ಮತ್ತು ಸ್ವಾಧ್ಯಾಯವನ್ನು ಮಾಡುವರೋ ಅವರು ಇಹಲೋಕದ ಸಕಲ ಭೋಗ ಭಾಗ್ಯಗಳನ್ನು ಪಡೆದು ಕೊನೆಗೆ ಲಿಂಗಾಂಗ ಸಾಮರಸ್ಯರೂಪವಾದ ಮುಕ್ತಿಯನ್ನು ಪಡೆದುಕೊಳ್ಳುವರು. ಈ ಭೋಗ ಮೋಕ್ಷಗಳು ಜಗತ್ತಿನ ಸರ್ವಮಾನವರಿಗೆ ದೊರೆಯಲೆಂಬ ಉದ್ದೇಶದಿಂದ ಈ ಗ್ರಂಥವನ್ನು ಅಂತರಜಾಲಕ್ಕೆ ಅಳವಡಿಸಲಾಗಿದೆ. ಸಂಸ್ಕೃತ ಮೂಲದ ಈ ಗ್ರಂಥವನ್ನು ಕನ್ನಡ,(ಅನುವಾದ-ಕಾಶೀ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಮತ್ತು ಸಂಪಾದನೆ-ಡಾ.ಎಸ್. ಆರ್. ಸಿದ್ಧಲಿಂಗಪ್ಪ, ಬೆಂಗಳೂರು) ಮರಾಠಿ,(ಪದ್ಯಾನುವಾದ ಮತ್ತು ಸಂಪಾದನೆ-ಡಾ. ಎಸ್.ಡಿ. ಪಸಾರಕರ್, ಸೋಲಾಪುರ) ತೆಲಗು,(ಅನುವಾದ ಮತ್ತು ಸಂಪಾದನೆ-ಡಾ. ಕೆ. ಪ್ರತಾಪ್, ತಿರುಪತಿ) ತಮಿಳು, (ಅನುವಾದ ಮತ್ತು ಸಂಪಾದನೆ-ಡಾ. ಗಣೇಶನ್,ಪಾಂಡಿಚರಿ) ಮಲಯಾಳಂ, (ಅನುವಾದ-ಶ್ರೀಮತಿ ಅಂಬಿಕಾ ಅಪ್ಪುಕುಟ್ಟನ್, ತಿರುವಾಂಕುಲಮ್ ಮತ್ತು ಸಂಪಾದನೆ-ಡಾ. ನಟೇಶನ್, ಕಾಲಡಿ) ಹಿಂದಿ,(ಅನುವಾದ ಮತ್ತು ಸಂಪಾದನೆ-ಡಾ. ಚತುವರ್ೇದಿ, ವಾರಣಸಿ) ಇಂಗ್ಲೀಷ(ಅನುವಾದ ಮತ್ತು ಸಂಪಾದನೆ-ಡಾ. ಎಂ. ಶಿವಕುಮಾರಸ್ವಾಮಿ) ಮತ್ತು ರಸ್ಸಿಯನ್(ಅನುವಾದ ಮತ್ತು ಸಂಪಾದನೆ-ಕುಮಾರಿ ಯುಲಿಯಾ(ಗೌರಿ), ಕೀವ್, ಯುಕ್ರೈನ್) ಮುಂತಾದ ಭಾಷೆಗಳಿಗೆ ಅನುವಾದಿಸಾಗಿದ್ದು ಇವೆಲ್ಲವುಗಳು ಇಲ್ಲಿ ಉಪಲಬ್ದವಿವೆ.

ಶುಕ್ರವಾರ, ಅಕ್ಟೋಬರ್ 25, 2013

ಜಂಗಮರ ಬಗ್ಗೆ ಎಚ್ಚರಿಕೆ ಇಂದ ಮಾತಾಡಲಿ

ಆತ್ಮೀಯರೇ
ಇಂದು ನಮ್ಮ ಸಮಾಜವು ಕವಲು ದಾರಿಯಲ್ಲಿ ಇದೆ.ಸಮಾಜದ ಉಧ್ಧಾರಕ್ಕಗಿ,ಭಕ್ತರ ಉದ್ಧಾರಕ್ಕಾಗಿ ತಲೆ ತಲಾಂತರದಿಂದ ಎಲ್ಲ ಸೌಲಭ್ಯಗಳಿಂದ ವಂಚಿತರಾಗಿ ಬಡವರಾಗಿಯೇ ಉಳಿದಿದ್ದೇವೆ. ಇಂದು ಏನಾದರು ವೀರಶೈವ ಧರ್ಮ ಉಳಿದುಕೊಂಡು ಬಂದಿದ್ದೆಯಾದರೆ ಅದು ನಮ್ಮ ಸಮಾಜದ ಪೂರ್ವಜರಿಂದ ಮಾತ್ರ ಎಂಬುವದು ಸೂರ್ಯನಷ್ಟೇ ಸತ್ಯ.ಬಸವಾದಿ ಪ್ರಮಥರ ವಚನಗಳು ರಕ್ಷಿಸಿಕೊಂಡು ಬಂದವರಲ್ಲಿ ಈ ಹಳ್ಳಿಯ ಹೈದ ಜಂಗಮರೆ ಹೊರತು ಅನಾಧಿಕಾರಿ ಲಿಂಗಾಯತಲ್ಲ. ಆದರೂ ಇತ್ತೀಚಿನ ದಿನಗಳಲ್ಲಿ ಈ ಜಂಗಮ ನಿಂದೆ ಹೆಚ್ಚಾಗಿದೆ. ನಾವು ಜಂಗಮರೆ ಅಲ್ಲವಂತೆ.ಹಾಗಾದರೆ ನಾವು ಯಾರು ? ಜಂಗಮರು ಯಾರು ಬೇಕಾದವರು ಆಗಲು ಬರುತ್ತದೆ ಎಂದು ಸ್ವಯಂ ಘೋಷಿತ ಬುದ್ದಿಜೀವಿಗಳ ಮೊಂಡ ವಾದವಾಗಿದೆ. ಆದರೆ ಅವರು ಇದೆ ಸಂಧರ್ಭದಲ್ಲಿ ಲಿಂಗ ಆಯತ ಮಾಡಿಕೊಂಡವರು ಮಾತ್ರ ಲಿಂಗಾಯತ ಎಂದು ಹೇಳುವದನ್ನು ಮರೆಯುತ್ತಾರೆ. ನಮ್ಮ ಜಂಗಮರು ಹುಟ್ಟಿನಿಂದ ಎಂದು ಜಂಗಮರೆಂದು ಹೇಳಿಕೊಂಡಿಲ್ಲ ನಾವು ಹುಟ್ಟಿ ಎಂಟು ವರ್ಷಗಳವರೆಗೆ ಲಿಂಗಾಯತರಾಗಿ ಮಾತ್ರ ಇದ್ದು, ಎಂಟು ವರ್ಷ ಮುಗಿದನಂತರ ವೀರಶೈವ ಪರಂಪರೆಯ ಉಪಾಚಾರ್ಯರಿಂದ ಕ್ರಮಬದ್ದವಾಗಿ ಅಯ್ಯಾಚಾರ ಮಾಡಿಕೊಂಡು ಜಂಗಮರಾಗಿ ಉಳಿದು ಕೊಂಡು ಬಂದಿದ್ದೇವೆ. ಅಯ್ಯಾಚಾರ ಆಗುವವವರೆಗೆ ಅಯ್ಯನವರು ಆಗಿರುವುದಿಲ್ಲ. ಇವತ್ತಿಗೂ ಈ ಸಂಸ್ಕಾರ ಮುಂದು ವರೆಸಿಕೊಂಡು ಬಂದಿದ್ದೇವೆ. ಆದರೆ ಲಿಂಗವಂತರು ಎಂದು ಹೇಳಿಕೊಳ್ಳುವ ಆ ತತ್ವದ ಬಗ್ಗೆ ವಾದಮಾಡುವ ಪೊಳ್ಳು ಪಂಡಿತರು ತಾವಾಗಲಿ ತಮ್ಮ ಮನೆಯ  ಎಲ್ಲ ಸದಸ್ಯರೆಲ್ಲರಾಗಲಿ ಲಿಂಗ ದೀಕ್ಷೆ ಹೊಂದಿದ್ದಾರೆಯೇ ? ಖಾತರಿ ಪಡಿಸಲಿ.ಆಗ ಜಂಗಮರಿಗೆ ಬುದ್ದಿ ಹೇಳಲು ಬರಲಿ.ಹೋಗಲಿ ... ಅವರು ಹೇಳುವ ಲಿಂಗಾಯತ ಧರ್ಮದಲ್ಲಿ ಜಂಗಮರೆಂದರೆ ಯಾರು ? ಅವರೇ ವಿಶ್ಲೇಷಣೆ ಮಾಡುವ ರೀತಿಯ ಜಂಗಮರು ಬೆರಳೆಣಕೆ ಅಷ್ಟಾದರೂ ಹುಡುಕಿ ಕೊಡುತ್ತಾರೆಯೇ?  ಹೋಗಲಿ ತಮ್ಮ ಸ್ವಯಂ ಘೋಷಿತ ಮಠಗಳಲ್ಲಿ ಪೀಠಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಯಾದರು ಲಿಂಗಾಯತರಾಗಿದ್ದರೆಯೇ ಎಂದು ಎದೆ ಮುಟ್ಟಿಕೊಂಡು ಹೇಳುತ್ತಾರೆಯೇ ? ಮೊದಲು ತಮ್ಮ ತಟ್ಟೆಯಲ್ಲಿ ಬಿದ್ದಿರುವ ಕತ್ತೆಯನ್ನು ತಗೆದು ಇನ್ನೊಬ್ಬರ ತಟ್ಟೆಯ ನೊಣ ತಗೆಯಲು ಹೋಗಲಿ. ಜಗತ್ತಿನಲ್ಲಿ ಸುಂತಿ ಆಗದ ಮುಸಲ ಮಾನನಿಲ್ಲ, ಉಪನಯನ ಮಾಡಿಕೊಳ್ಳದ ಬ್ರಾಹ್ಮಣನಿಲ್ಲ ಅದೇ ರೀತಿ ಪವಿತ್ರ ಸ್ನಾನ ಮಾಡದ ಕ್ರಿಶ್ಚಿಯನ ಇಲ್ಲ. ಅದೇ ರೀತಿ ಒಂದು ಸಣ್ಣ ಧರ್ಮ ದಿಂದಾ ಹಿಡಿದು ಬುಡಕಟ್ಟು ಜನಾಂಗದ ಸಣ್ಣ ಗುಂಪು ಇರುವ ಜನಾಂಗವು ತಮ್ಮ ಆಚರಣೆ ಬಿಟ್ಟಿಲ್ಲ.ಆದರೆ ಲಿಂಗಾಯತರಲ್ಲಿ ಕಡ್ಡಾಯ ಲಿಂಗ ಧೀಕ್ಷೆ ಸಂಸ್ಕಾರ ಮಾಡಿಕೊಂಡವರು ಎಷ್ಟು ಜನರಿದ್ದಾರೆ ಹೇಳಲಿ. ಯಾರ ಎದೆಯ ಮೇಲೆ ಯಾದರು ಲಿಂಗ ಅನ್ನುವದು ಇದ್ದರೆ ಅದು ಅವರೆಲ್ಲ ಹುಟ್ಟಿದಾಗ ಆ ಊರ ಜಂಗಮ ಕಟ್ಟಿದ್ದೆ ಹೊರತು ಬೇರೆ ಯಾರು ಅಲ್ಲ. ಪ್ರತಿ ಹಳ್ಳಿಗೆ ಹೋಗಿ ಲಿಂಗ ಧಾರಣೆ ಮಾಡುವದು ಈ ಪಟ್ಟಾಧಿಕಾರಿಗಳಿಗಾಗಲಿ ಜಗದ್ಗುರುಗಳಿಗಾಗಲಿ ಸಾಧ್ಯವಾಗದೆಂದು ನಮ್ಮನ್ನೆಲ್ಲ ಅಯ್ಯಚಾರ ಮಾಡಿ ಹಳ್ಳಿಯಲ್ಲಿನ ಭಕ್ತರಿಗೆ ಲಿಂಗಕಟ್ಟಲು ಅಧಿಕಾರ ನೀಡಿದರು. ಈ ಒಣ ಅಧಿಕಾರಕ್ಕಾಗಿ ಹೊಲ ಮನಿ ಉದ್ಯೋಗ ವ್ಯಾಪಾರ ಬಿಟ್ಟು ಬಡವರಾಗಿ ಉಳಿಯ ಬೇಕಾಯಿತು.ನಮಗಾದರೂ ಈ ಜಂಗಮ ಪದವಿ ಬೇಕಾಗಿಲ್ಲ ಯಾರು ಬೇಕಾದವರು ಮಾಡಿಕೊಂಡು ಬರಲಿ ನಮ್ಮ ಅಭ್ಯಂತರವಿಲ್ಲ. ಆದರೆ ನಮಗೆ ಹೇಳುವ ಅಧಿಕಾರ ಇವರಿಗೆ ಕೊಟ್ಟವರಾರು ? ಪ್ರಶ್ನಿಸಬೇಕಾಗುತ್ತದೆ. ನಿಮಗೆ ಹಳ್ಳಿಯ ಜಂಗಮರಿಗಿಂತ ಆಳವಾದ ಜ್ಞಾನ ಇರಬಹುದೇ ಹೊರತು ಅವರನ್ನು ಟೀಕಿಸುವ  ಅಧಿಕಾರ ನಮ್ಮ ಗುರು ಪರಂಪರೆಗೆ ಮಾತ್ರ ವಿದೆ ಬೇರೆ ಯಾರಿಗೂ ಇಲ್ಲ. ಬೇರೆ ಧರ್ಮದ ಬಗ್ಗೆ ನಮಗೂ ಚನ್ನಾಗಿ ಗೊತ್ತಿದೆ ಎಂದ ಮಾತ್ರಕ್ಕೆ ಅವರ ಆಚರಣೆಯ ಲೋಪ ದೋಷ ತಿದ್ದಲು ನಮಗೆ ಅಧಿಕಾರವಿಲ್ಲ. ಹಾಗೆಯೇ ಲಿಂಗ ಆಯತ ಮಾಡಿಕೊಳ್ಳದವರು ವೀರಶೈವ ಧರ್ಮದ ಬಗ್ಗೆ ಅಲ್ಲಿರುವ ಕೆಲ ಲೋಪ ದೋಷಗಳ ಬಗ್ಗೆ ಮಾತನ್ನಾಡಿದರೆ ಯಾವನೋ ಯಾವದೋ ಧರ್ಮದ ಬಗ್ಗೆ ಮಾತಾಡಿದಂತಾಗುತ್ತದೆ.ಯಾರಾದರು ಮಾತನಾಡುವವರು ಜಂಗಮರ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇಂದ ಮಾತಾಡಲಿ  ಮಾನವ ಧರ್ಮಕ್ಕೆ ಜಯವಾಗಲಿ ಧರ್ಮ ದಿಂದಲೇ ವಿಶ್ವಕ್ಕೆ ಶಾಂತಿ.  ಪಂಚಾಚಾರ್ಯ ರಿಗೆ ಜಯವಾಗಲಿ ಜಂಗಮ ಪ್ರೇಮಿ ಅಣ್ಣ ಬಸವಣ್ಣನವರಿಗೆ ಜಯವಾಗಲಿ.