ನಾನು ಈ ಬ್ಲಾಗನಲ್ಲಿ ನಿಮ್ಮೊಂದಿಗೆ ಸಮಾಜದ ಸಂಘಟನೆ ಕುರಿತು ವಿಚಾರ ವಿನಿಮಯ ಮಾಡಿಕೊಳ್ಳ ಬಯಸುತ್ತೇನೆ. ವೀರಶೈವ ಜಂಗಮರು ಮುಂದುವರೆದ ಜನಾಂಗದ ಹಣೆ ಪಟ್ಟಿಯೊಂದಿಗೆ ಅತ್ಯಂತ ಹಿಂದುಳಿದ ಸಮಾಜವಾಗಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶದ ಜಂಗಮರ ಸ್ಥಿತಿ ಗತಿ ಅತ್ಯಂತ ಹೀನವಾಗಿದೆ. ಶೈಕ್ಷಣಿಕವಾಗಿ,ಆರ್ಥಿಕವಾಗಿ ಅತ್ಯಂತ ಹಿಂದುಳಿದ ಸಮಾಜ ವಾಗಿಹೊರಹೊಮ್ಮುತ್ತಿದೆ ಈ ನಮ್ಮ ಜಂಗಮಸಮಾಜ . ಪರಂಪರೆಯಿಂದ ಬಂದ ಕಾಯಕವನ್ನೇ ನಂಬಿ ಬದಕುವದು ಅಸಾಧ್ಯವಾಗಿದೆ. ಸರಕಾರದ ದೃಷ್ಟಿಯಲ್ಲಿ ನಾವು ಮುಂದುವರೆದ ಜನಾಂಗ ವಾಗಿರುವದರಿಂದ ಸರಕಾರದ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. ಹಳ್ಳಿಯ ಈ ಬಡ ಜಂಗಮರಿಗೆ ಹಿಂದಿನಿಂದ ಮಾಡಿಕೊಂಡು ಬಂದ ಕಾಯಕ ಬಿಟ್ಟರೆ ಬೇರೆ ಯಾವ ಕೆಲಸ ಮಾಡಲು ಇವರಿಗೆ ಬರುದಿಲ್ಲ ಅಥವಾ ಬೇರೆಯೇನಾದರೂ ಮಾಡಿ ಆರ್ಥಿಕವಾಗಿ ಬಲಿಷ್ಠವಾಗ ಬೇಕೆಂದರೆ ಕೆಲವರಿಗೆ ಸ್ವಾಭಿಮಾನ ಕಾಡಿದರೆ ; ಕೆಲವರಿಗೆ ಈ ಸಮಾಜ ಬಿಡುತ್ತಿಲ್ಲ. ಮಕ್ಕಳಿಗಾದರೂ ಉನ್ನತ ಶಿಕ್ಷಣ ಕೊಡಿಸಿ ಆರ್ಥಿಕವಾಗಿ ಸಬಲರನ್ನಾಗಿ ಮಾಡಬೇಕೆಂದರೆ ಆರ್ಥಿಕ ಶಕ್ತಿ ಇವರ ರಟ್ಟೆಯಲ್ಲಿ ಇಲ್ಲಾ.
ವೀರಶೈವ ಧರ್ಮದಲ್ಲಿ ಜಂಗಮರಿಗೆ ಗೌರವ ಕಡಿಮೆಯಾಗುತ್ತಿದೆ. ಅಥವಾ ಈ ಗೌರವ ಕಡಿಮೆ ಮಾಡಲಾಗುತ್ತಿದೆ. ಇದಕ್ಕೆ ಬೇರೆಯಾರು ಕಾರಣರಲ್ಲಾ ನಮ್ಮಕುಲದಲ್ಲೇ ಹುಟ್ಟಿ ಅಥವಾ ಈ ಕುಲದಲ್ಲಿ ಹುಟ್ತಿದ್ದಕ್ಕಾಗಿಯೇ ಮಠಾಧಿಪತಿ,ಪೀಠಾಧಿಪತಿಗಳಾಗಿರುವ ಕುಲವೈರಿಗಳೇ ಕಾರಣ. ಕೆಲವು ಮಹಾಸ್ವಾಮಿಗಳOತು ಈ ಬಡಜಂಗಮರನ್ನು ಪುರೋಹಿತ ಶಾಯಿಗಳೆಂದು ಕರೆದು, ಇವರು ಜಂಗಮರೇ ಅಲ್ಲಾ ಇವರನ್ನು ಯಾರು ಊಟಕ್ಕೂ ಕರೆಯ ಬೇಡಿರಿ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಕೆಲವರ ಕಾರಣದಿಂದಾಗಿ ವೀರಶೈವ ಸಮಾಜ ಒಡೆದು ಚೂರು ಚೂರಾಗುತ್ತಿದೆ. ಜಾತಿಗೊಬ್ಬ ಜಗದ್ಗುರು ಹುಟ್ಟಿ ಕೊಳ್ಳುತ್ತಿದ್ದಾರೆ .ಪಂಚ ಪೀಠಗಳ ಸೂತ್ರಾನುವರ್ತಿಗಳೆಂದು ಹೇಳಿಕೊಳ್ಳುವ ಈ ಜಂಗಮರಿಗೆ ಪಂಚ ಪೀಠಗಳೂ ಕೈ ಹಿಡಿಯುವ ಕೆಲಸ ಮಾಡುವದಿರಲಿ ಹತ್ತಿರಕ್ಕೂ ಬಿಟ್ಟುಕೊಳ್ಳುತ್ತಿಲ್ಲಾ. ಯಾಕಂದರೆ ಈ ಬಡ ಜಂಗಮ ರಿಂದ ಯಾವುದೇ ಲಾಭ ಇವರಿಗೆ ಇಲ್ಲಾ. ಕೆಲವು ಮಠಗಳಲ್ಲಿ ವೈದಿಕ ಜ್ಯೋತಿಷ ಉಚಿತ ಪಾಠ ಶಾಲೆಯಲ್ಲಿ ಪ್ರವೇಶ ನೀಡಿ ಮಠದ ಚಾಕರಿ ಮಾಡಿಸಿಕೊಳ್ಳುತ್ತಿದ್ದಾರೆ ಹೊರತು ಇದು ಉಪಕಾರವೇ ಅಲ್ಲಾ. ಈ ವಿದ್ಯಯಿಂದ ಯಾವ ಲಾಭವು ಇಲ್ಲಾ . ಹೊಟ್ಟೆ ತುಂಬಿಸದ ಈ ವಿದ್ಯಉಚಿತವಾಗಿ ನೀಡಿ ಫಲವೇನು? ನಿಜ ಹೇಳ ಬೇಕೆಂದರೆ ಈ ಜಂಗಮರು ನೀಜವಾಗಿಯು ಪ್ರತಿಭಾವಂತರಿರುತ್ತಾರೆ ಆದರೆ ಅವರು ಉನ್ನತ ಶಿಕ್ಷಣದಿಂದ ವಂಚಿತರಗುತಿದ್ದಾರೆಇತ್ತೀಚಿಗೆ ಕೆಲವು ಸಮಾಜದ ಪ್ರಜ್ಞಾವಂತರು ಈ ಸಮಾಜವನ್ನು ಹಿಂದುಳಿದ ವರ್ಗಕ್ಕೆ ಸೇರಿಸಲು ಪ್ರಯತ್ನ ಪಡುತ್ತಿರುವಾಗ ನಮ್ಮ ಕುಲದಲ್ಲಿಯೇ ಹುಟ್ಟಿ ಉನ್ನತ ಮಠ ಪೀಠವನ್ನು ಏರಿದ ಕೆಲವು ಮಠ ಪೀಠಾಧಿಶರು ಬೇರೆ ಹಿಂದುಳಿದ ವರ್ಗದ ಜನರನ್ನು ಎತ್ತಿ ಕಟ್ಟಿ ನಿಮ್ಮ ಮೀಸಲಾತಿಯನ್ನು ಕದಿಯಲು ಬಂದಿದ್ದಾರೆ ಎಂದು ಪ್ರತಿಭಟನೆಗೆ ಇಳಿಸಿ ತಾವೇ ಮುಂಚೊಣಿಯಲ್ಲಿ ನಿಂತು ಹೋರಾಟ ಮಾಡಿದ್ದರೆ. ಹೊರಗಿನ ವೈರಿಗಳನ್ನು ಎದುರಿಸಬಹುದು ಆದರೆ ಹಿತಶತ್ರುಗಳನ್ನು ಎದುರಿಸುವದು ಹೇಗೆ ಸಾಧ್ಯ. ಹೀಗಾಗಿ ನಮ್ಮ ವೈರಿಗಳು ಹೊರಗಿಲ್ಲ ಒಳಗೆಯಿದ್ದಾರೆ. ನಮ್ಮ ಸಮಾಜದ ಪ್ರಥಮ ಮತ್ತು ಕೊನೆಯ ವೈರಿಗಳೆಂದರೆ ನಮ್ಮಕುಲದವರೆಯಾದ ಕೆಲವು ಮಠಾಧಿಶರು. ಹೀಗಾಗಿ ಜಂಗಮರ ಸಂಘಟನೆಯಾಗಬೇಕಾಗಿದೆ. ಗುರು ವಿರಕ್ತ ಪರಂಪರೆಯ ಯಾವ ಒಂದು ನಿರ್ಧಿಷ್ಠ ಪಂಗಡಕ್ಕೆಅಂಟಿಕೊಳ್ಳದೆ ಸಂಘಟಿತರಾಗಬೇಕಾಗಿದೆ.ಈ ಸಂಘಟನೆಯ ಹೆಸರು ಅಖಿಲ ಭಾರತ ವೀರಶೈವ ಜಂಗಮ ಸಮಾಜ ಮಹಾ ಸಭಾ ಎಂದು ಹೆಸರಿಡಲಾಗಿದೆ. "ನಮ್ಮಉಧ್ಧಾರ ನಮ್ಮ ಕೈಯಲ್ಲಿ "ಎಂಬುದು ನಮ್ಮ ಧ್ಯೇಯ ವಾಕ್ಯ. ಜಂಗಮ ಸಮಾಜದ ಶೈಕ್ಷಣಿಕ ,ಸಾಮಾಜಿಕ,ಆರ್ಥಿಕ ಪ್ರಗತಿಯೇ ನಮ್ಮಗುರಿ.ಈ ನಮ್ಮ ವಿಚಾರಕ್ಕೆ ನಿಮ್ಮ ಅಭಿಪ್ರಾಯ ತಿಳಿಸಿರಿ.ನಮ್ಮ
